newsics.com
ಮಧ್ಯ ವಯಸ್ಸಿನ ಅಥವಾ ಅದಕ್ಕೂ ಹೆಚ್ಚಿನ ವಯಸ್ಸಿನವರು ಒಂದು ಕಾಲಿನ ಮೇಲೆ 10 ಸೆಕೆಂಡುಗಳ ಕಾಲ ನಿಲ್ಲಲು ವಿಫಲರಾಗುತ್ತಿದ್ದರೆ ಅವರು ಮುಂದಿನ 7 ವರ್ಷಗಳಲ್ಲಿ ಸಾಯುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನವೊಂದು ತಿಳಿಸಿದೆ.
51 ರಿಂದ 75 ವರ್ಷಗಳ ನಡುವಿನ ವಯಸ್ಸಿನ ಜನರನ್ನು 10 ಸೆಕೆಂಡುಗಳ ಕಾಲ ಒಂದೇ ಕಾಲಿನ ಮೇಲೆ ನಿಲ್ಲುವಂತೆ ಹೇಳಲಾಯ್ತು. ಇದನ್ನು ಮಾಡಲು ವಿಫಲರಾದವರಲ್ಲಿ ಬಹುತೇಕರು ಮುಂದಿನ ಏಳು ವರ್ಷಗಳ ಒಳಗಾಗಿ ಮೃತಪಟ್ಟಿದ್ದಾರೆ. ಈ ಅಧ್ಯಯನದಲ್ಲಿ ಬ್ರೆಜಿಲ್ ಮೂಲದ ಸುಮಾರು 1700 ಜನರನ್ನು ಇರಿಸಿಕೊಳ್ಳಲಾಗಿತ್ತು. ಇವರಲ್ಲಿ ಹೆಚ್ಚಿನವರು ಬಿಳಿ ವರ್ಣದವರಾಗಿದ್ದರು.