ಅಹಮದಾಬಾದ್: ಮುಟ್ಟಾದ ಮಹಿಳೆ ಅಡುಗೆ ಮಾಡಿ ಪತಿಗೆ ಬಡಿಸಿದರೆ ಆಕೆ ಮುಂದಿನ ಜನ್ಮದಲ್ಲಿ ನಾಯಿಯಾಗುತ್ತಾಳೆ.
ಗುಜರಾತ್ ಭುಜ್‌ನ ಸ್ವಾಮಿನಾರಾಯಣ ದೇವಸ್ಥಾನದ ಸ್ವಾಮಿ ಕೃಷ್ಣಸ್ವರೂಪ್ ದಾಸ್ ಜಿ ಇಂತಹದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಟ್ಟಿನ ಅವಧಿಯಲ್ಲಿ ಪತ್ನಿ ಮಾಡಿದ ಊಟ ತಿನ್ನುವ ವ್ಯಕ್ತಿ ಕೂಡ ಮುಂದಿನ ಜನ್ಮದಲ್ಲಿ ಎತ್ತಾಗಿ ಜನಿಸುತ್ತಾನೆ ಎಂದು ಕಾರ್ಯಕ್ರಮವೊಂದರ ಭಾಷಣ ವೇಳೆ ಹೇಳಿದ್ದಾರೆ. ಮುಟ್ಟಾದ ಮಹಿಳೆಯಿಂದ ಆಹಾರ ಸ್ವೀಕರಿಸಿದರೆ ನೀವೂ ದೋಷಿಗಳಾಗ್ತೀರಿ ಎಂದು ಪುರುಷರಿಗೆ ಸ್ವಾಮಿ ಹೇಳಿದ್ದಾರೆ. 10 ವರ್ಷಗಳಲ್ಲಿ ಇದೇ ಮೊದಲ ಬಾರಿ ನಾನು ಇಂಥ ಹೇಳಿಕೆ ನೀಡುತ್ತಿದ್ದೇನೆ ಎಂದೂ ಕೃಷ್ಣಸ್ವರೂಪ್ ದಾಸ್ ಜಿ ಹೇಳಿದ್ದಾರೆ.
ಮುಟ್ಟಿನ ವೇಳೆ ಅಡುಗೆ ಮಾಡಿ ಪತಿಗೆ ಬಡಿಸುವ ಪತ್ನಿಗೆ ನಾಯಿ ಜನ್ಮ!
Follow Us