ವಾರಾಣಸಿ: ಸಂಕ್ರಾಂತಿ ಬಳಿಕ ಕಾಶಿ ವಿಶ್ವನಾಥನನ್ನು ಸ್ಪರ್ಶಿಸಬೇಕೆಂದರೆ ನಿಗದಿ ಮಾಡಲಾದ ಬಟ್ಟೆಯನ್ನೇ ಧರಿಸಿರಬೇಕು.
ಪುರುಷರು ಧೋತಿ ಕುರ್ತಾ, ಮಹಿಳೆಯರು ಸೀರೆ ಧರಿಸಿದ್ದರೆ ಮಾತ್ರ ಜ್ಯೋತಿರ್ಲಿಂಗ ಸ್ಪರ್ಶಿಸಬಹುದು. ಇತರೆ ಮಾದರಿಯ ಬಟ್ಟೆ ಧರಿಸಿದ್ದರೆ ದೂರದಿಂದ ಜ್ಯೋತಿರ್ಲಿಂಗದ ದರ್ಶನ ಪಡೆಯಬಹುದು.
ಹೊಸ ನಿಯಮದ ಪ್ರಕಾರ, ಜೀನ್ಸ್, ಪ್ಯಾಂಟ್, ಶರ್ಟ್ ಮತ್ತು ಸೂಟ್ ಧರಿಸಿದ ಭಕ್ತರು ದೇವಸ್ಥಾನ ಪ್ರವೇಶ ಮಾಡಬಹುದು. ಆದರೆ ದೇವರನ್ನು ಸ್ಪರ್ಶಿಸಲು ಸಾಧ್ಯವಿಲ್ಲ.
ಮಕರ ಸಂಕ್ರಾಂತಿ ನಂತರ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಬೆಳಗಿನ ಮಂಗಳಾರತಿಯಿಂದ ಮಧ್ಯಾಹ್ನದ ಮಹಾ ಮಂಗಳಾರತಿಯವರೆಗೆ ಸ್ಪರ್ಶ ದರ್ಶನವಿರಲಿದೆ. ಕಾಶಿ ವಿದ್ವತ್ ಪರಿಷದ್ ಈ ಡ್ರೆಸ್ ಕೋಡ್ ಜಾರಿ ಮಾಡಲು ನಿರ್ಧರಿಸಿದೆ.
ಸಂಕ್ರಾಂತಿ ಬಳಿಕ ಕಾಶಿ ವಿಶ್ವನಾಥನ ಸ್ಪರ್ಶ ದರ್ಶನಕ್ಕೆ ಡ್ರೆಸ್ ಕೋಡ್
Follow Us