Thursday, May 26, 2022

ಬೀಟಿಂಗ್ ರಿಟ್ರೀಟ್‌ನಲ್ಲಿ ಗಾಂಧೀಜಿಗೆ ಪ್ರಿಯವಾದ ‘ಅಬೈಡ್ ವಿತ್ ಮಿ’ ಗೀತೆ ಕೈಬಿಡಲು ನಿರ್ಧಾರ

Follow Us

newsics.com

ನವದೆಹಲಿ: ಜ.29ರಂದು ಇಲ್ಲಿನ ವಿಜಯ್‌ಚೌಕ್‌ನಲ್ಲಿ ನಡೆಸುವ ಗಣರಾಜ್ಯೋತ್ಸವ ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮದಲ್ಲಿ ಮಹಾತ್ಮಾಗಾಂಧಿಯವರಿಗೆ ಪ್ರಿಯವಾಗಿದ್ದ ‘ಅಬೈಡ್‌ ವಿತ್ ಮಿ’ ಗೀತೆಯನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಮುಗಿಯುವ ದ್ಯೋತಕವಾಗಿ ಈ ಗೀತೆಯನ್ನು ನುಡಿಸಲಾಗುತ್ತಿತ್ತು. ಶತಮಾನಗಳಷ್ಟು ಹಳೆಯದಾದ ಸೇನಾ ಸಂಪ್ರದಾಯದಲ್ಲಿ ಇದು ಬಳಕೆಯಲ್ಲಿದೆ. ಆದರೆ ಇದೀಗ ಈ ಗೀತೆಯನ್ನು ಕೈಬಿಡಲಾಗುತ್ತಿದೆ.

‘ಶಾಶ್ವತ ಜ್ಯೋತಿ’ಯನ್ನು ಇಂಡಿಯಾ ಗೇಟ್‌ ಬಳಿಯ ಅಮರ್‌ ಜವಾನ್‌ ಜ್ಯೋತಿ ಸ್ಥಳದಿಂದ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳಕ್ಕೆ ಸ್ಥಳಾಂತರಿಸಿದ್ದ ತೀರ್ಮಾನದ ಹಿಂದೆಯೇ ಸರ್ಕಾರದ ಈ ನಿರ್ಧಾರವೂ ಹೊರಬಿದ್ದಿದೆ ಎಂದು‌ ಮೂಲಗಳು ತಿಳಿಸಿವೆ.

‘ಅಬೈಡ್‌ ವಿತ್ ಮಿ’ ಗೀತೆಯು ‘ಜೀವನಪೂರ್ತಿ, ಸಾವಿನವರೆಗೂ ಜತೆಗೇ ಇರು’ ಎಂದು ದೇವರನ್ನು ಕೋರುವ ಪ್ರಾರ್ಥನಾ ಗೀತೆಯಾಗಿದೆ. 1847ರಲ್ಲಿ ಸ್ಕಾಟಿಷ್‌ನ ಹೆನ್ರಿ ಫ್ರಾನ್ಸಿಸ್‌ ಲೈಟ್ ಅವರು ಈ ಗೀತೆಯನ್ನು ರಚಿಸಿದ್ದರು.

ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ, ಮುಂದುವರಿದ ಗುಂಡಿನ ಚಕಮಕಿ

ರಾಜ್ಯದಲ್ಲಿ 42,470 ಮಂದಿಗೆ ಕೊರೋನಾ, 35,140 ಸೋಂಕಿತರು ಗುಣಮುಖ, 26 ಜನ ಸಾವು

ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ

ಮತ್ತಷ್ಟು ಸುದ್ದಿಗಳು

Latest News

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...

ಮಗನ ಪಬ್ ಜಿ ಆಟಕ್ಕೆ ತಾಯಿ ಬಲಿ

newsics.com ಚಿಕ್ಕಮಗಳೂರು: ಮಗನ ಪಬ್ ಜಿ ಆಟಕ್ಕೆ, ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಗಿರಿಶ್ರೇಣಿಯ ಅಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ. ಇಮ್ತಿಯಾಜ್ ಮತ್ತು ಮೈಮುನ್ನಾ ದಂಪತಿ ಕುಟುಂಬ ಎರಡು ವರ್ಷದಿಂದ ಎಸ್ಟೇಟ್ ನ ಕೂಲಿ ಲೈನ್...
- Advertisement -
error: Content is protected !!