newsics.com
ನವದೆಹಲಿ: ಇನ್ನು ಕೆಲವೇ ದಶಕಗಳಲ್ಲಿ ಭಾರತದಲ್ಲಿ ಬಿಸಿಗಾಳಿ, ಚಂಡಮಾರುತ ಹಾಗೂ ಬರ ಹೆಚ್ಚಲಿದೆ.
ಇದೇ ವೇಳೆ, ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ ಎಂದು ಸೋಮವಾರ ಬಿಡುಗಡೆಯಾದ ಅಂತರ್ ಸರ್ಕಾರ ಸಮಿತಿ (ಐಪಿಸಿಸಿ)ಯ ವರದಿ ತಿಳಿಸಿದೆ.
21ನೇ ಶತಮಾನದಲ್ಲಿ ಉಷ್ಣಮಾರುತ ಹಾಗೂ ತೇವಭರಿತ ತಾಪಮಾನವು ಹೆಚ್ಚು ತೀವ್ರವಾಗಿರಲಿದ್ದು, ಇದು ಆಗಾಗ ಮರುಕಳಿಸಲಿದೆ. ವಾರ್ಷಿಕ ಮಳೆ ಹಾಗೂ ಮುಂಗಾರು ಮಳೆ ಸುರಿಯುವಿಕೆ ಪ್ರಮಾಣ ಅಧಿಕವಾಗಲಿದೆ ಎಂದು ವರದಿ ಮಾಹಿತಿ ನೀಡಿದೆ.
ತಾಪಮಾನದಲ್ಲಿ ಅತಿಯಾದ ಹೆಚ್ಚಳವಾಗುತ್ತಿದ್ದರೆ, ಇನ್ನೊಂದೆಡೆ ಚಳಿಯ ತೀವ್ರತೆ ಕಡಿಮೆಯಾಗತೊಡಗಿದೆ ಎಂದು ವರದಿ ಹೇಳಿದೆ.
ಏಷ್ಯಾದ ಬಹುತೇಕ ಭಾಗಗಳಲ್ಲಿಯೂ ಮಳೆ ಸುರಿಯುವಿಕೆಯ ಪ್ರಮಾಣ ಹೆಚ್ಚಾಗಲಿದೆ.ನಡೆಯುತ್ತಿರುವಾಗ ನಡೆಯುತ್ತಿರುವಾಗ 20ನೇ ಶತಮಾನದ ದ್ವಿತೀಯಾರ್ಧದಲ್ಲಿ ದಕ್ಷಿಣ ಹಾಗೂ ಆಗ್ನೇಯ ಮುಂಗಾರು ದುರ್ಬಲಗೊಂಡಿದೆ. ಅತಿಯಾದ ಮಾನವ ಚಟುವಟಿಕೆಗಳಿಂದಾಗಿ ವಾತಾವರಣದಲ್ಲಿ ದ್ರವ ಅಥವಾ ಅನಿಲ ಕಣ (ಅಸೆನೋಲ್)ಗಳಲ್ಲಿ ಹೆಚ್ಚಳವಾಗಿರುವುದೇ ಇದಕ್ಕೆ ಕಾರಣ ಎಂದು ವರದಿ ಬಹಿರಂಗಪಡಿಸಿದೆ.
ಆಗಸ್ಟ್ 15ರವರೆಗೆ ಬೆಂಗಳೂರಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ: ಸಚಿವ ಅಶೋಕ್