newsics.com
ಬೆಂಗಳೂರು: ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ತನಿಖೆ ನಡೆಸುತ್ತಿರುವ ಸಿಸಿಬಿ, ನಟ ಯೋಗಿ (ಲೂಸ್ ಮಾದ), ನಟಿ ಪ್ರೇಮಾ ಅವರ ಸೋದರ, ಕ್ರಿಕೆಟರ್, ಬಿಗ್ ಬಾಸ್ ಖ್ಯಾತಿಯ ಎನ್ ಸಿ ಅಯ್ಯಪ್ಪ ಅವರನ್ನು ವಿಚಾರಣೆಗೊಳಪಡಿಸಿದೆ. ಇನ್ನಿಬ್ಬರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿದೆ.
ಓರ್ವ ಹಾಲಿ ಸಂಸದ ಹಾಗೂ ಓರ್ವ ಮಾಜಿ ಸಂಸದರ ಪುತ್ರರಿಗೂ ನೋಟಿಸ್ ನೀಡಲು ಸಿಸಿಬಿ ಸಿದ್ಧತೆ ನಡೆಸಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಇನ್ನೊಂದೆಡೆ, ಎನ್’ಸಿಬಿ ಡ್ರಗ್ ಪೆಡ್ಲರ್’ಗಳನ್ನು ಬಂಧಿಸಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ಕೇಸ್’ಗೆ ಸಂಬಂಧಿಸಿದಂತೆ ಸೋಮವಾರ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಅವರು, ನಟ ಲೂಸ್ ಮಾದ ಖ್ಯಾತಿಯ ಯೋಗಿ ಹಾಗೂ ಮಾಜಿ ಕ್ರಿಕೆಟಿಗ ಎನ್ ಸಿ ಅಯ್ಯಪ್ಪ ಅವರನ್ನು ವಿಚಾರಣೆ ನಡೆಸಿದ್ದಾರೆ.
ಶ್ರೀಲಂಕಾದ ಕ್ಯಾಸಿನೋ ಮೂಲಕ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಕ್ಕೆ ಡ್ರಗ್ಸ್ ಪೂರೈಕೆಯಾಗುತ್ತಿರುವ ಶಂಕೆ ಇದೆ. ಶ್ರೀಲಂಕಾ ಮಾತ್ರವಲ್ಲದೆ, ಇಂಡೋನೇಶಿಯಾ, ಫಿಲಿಪೈನ್ಸ್, ಮಲೇಶಿಯಾದಿಂದಲೂ ಡ್ರಗ್ಸ್ ಪೂರೈಕೆ ಜಾಲವಿದೆ ಎಂಬ ಮಾಹಿತಿಯಿದೆ.