ನವದೆಹಲಿ: 2024ರ ವೇಳೆಗೆ ಭಾರತೀಯ ರೈಲುಗಳು ಶೇ.100 ವಿದ್ಯುದೀಕರಣಗೊಳ್ಳಲಿವೆ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.
2030ರೊಳಗೆ ರೈಲುಗಳನ್ನು ಹೊಗೆರಹಿತ ಗಾಡಿಗಳನ್ನಾಗಿ ರೂಪಿಸಲಾಗುವುದು. 2024ರ ಹೊತ್ತಿಗೆ ಎಲ್ಲ ರೈಲುಗಳು ವಿದ್ಯುತ್ ಚಾಲಿತವಾಗಲಿವೆ. ಎಲ್ಲ ರೈಲುಗಳು ವಿದ್ಯುದ್ದೀಕರಣಗೊಳ್ಳುತ್ತಿರುವುದು ಭಾರತದಲ್ಲೇ ಮೊದಲು. ಈ ಯೋಜನೆಗೆ ಬ್ರೆಜಿಲ್ನ ಸಹಯೋಗ ಪಡೆಯಲು ಯೋಜಿಸಲಾಗಿದೆ ಎಂದರು.
ಅಮೆರಿಕ, ರಷ್ಯಾ ಮತ್ತು ಚೀನಾ ಹೊರತುಪಡಿಸಿ ಭಾರತ ಅತಿದೊಡ್ಡ ರೈಲು ಸೌಲಭ್ಯವುಳ್ಳ ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಇದು ದೇಶಾದ್ಯಂತ 67,368 ಕಿ.ಮೀ ಉದ್ದ ಹಾಗೂ 7,300 ನಿಲ್ದಾಣಗಳನ್ನು ಹೊಂದಿದೆ. ಪ್ರತಿನಿತ್ಯ 23 ಮಿಲಿಯನ್ ಪ್ರಯಾಣಿಕರು 13 ಸಾವಿರ ರೈಲುಗಳಲ್ಲಿ ಪ್ರಯಾಣಿಸುತ್ತಾರೆ ಎಂದು ಸಚಿವ ಗೋಯಲ್ ತಿಳಿಸಿದರು.
2024 ಕ್ಕೆ ಎಲ್ಲ ರೈಲುಗಳ ವಿದ್ಯುದೀಕರಣ: ಪೀಯೂಷ್
Follow Us