newsics.com
ಕೆಲವು ಏಷ್ಯನ್ ಆನೆಗಳು ನಾಚಿಕೆ ಸ್ವಭಾವವನ್ನು ಹೊಂದಿರುವುದರಿಂದ ಎಲ್ಲರೆದುರು ಆಹಾರವನ್ನು ಸೇವಿಸಲು ನಾಚಿಕೆ ಪಡುತ್ತವೆ. ಹೀಗಾಗಿ ತಮ್ಮ ಅರಣ್ಯದ ಆವಾಸ ಸ್ಥಾನಗಳ ಅಂಚಿನಲ್ಲಿ ಇರುವ ಮಾನವ ವಸಾಹತುಗಳ ಸಮೀಪದಲ್ಲಿರುವ ಕಸದ ತೊಟ್ಟಿಗಳಿಗೆ ನುಗ್ಗಿ ತ್ವರಿತವಾಗಿ ಆಹಾರವನ್ನು ಸೇವಿಸುವ ಭರದಲ್ಲಿ ಕಸವನ್ನು ಸಹ ತಿಂದು ಬಿಡುತ್ತವೆ.
ತ್ವರಿತವಾಗಿ ಆಹಾರ ತಿನ್ನುವ ಭರದಲ್ಲಿ ಪ್ಲಾಸ್ಟಿಕ್ ಹಾಗೂ ಪ್ಯಾಕೆಜಿಂಗ್ ಪದಾರ್ಥಗಳನ್ನು ಸೇವಿಸುವ ಆನೆಗಳು ಕಾಡಿನಲ್ಲಿ ಮಲ ವಿಸರ್ಜನೆ ಮಾಡುವಾಗ ಇವೆಲ್ಲವೂ ಕಾಡಿನಲ್ಲಿ ಸಂಗ್ರಹವಾಗುತ್ತದೆ ಎಂದು ಪರಿಸರ ಸಂಶೋಧಕರಾದ ಗೀತಾಂಜಲಿ ಕಟ್ಲಂ ಹೇಳಿದ್ದಾರೆ.