newsics.com
ನ್ಯೂಯಾರ್ಕ್: ಖಾಸಗಿ ಜೆಟ್ನಲ್ಲಿ ಫ್ಲೈಟ್ ಅಟೆಂಡೆಂಟ್ ಸ್ನೇಹಿತೆ ಎನ್ನಲಾದ ವ್ಯಕ್ತಿ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಜಗತ್ತಿನ ನಂಬರ್ ಒನ್ ಶ್ರೀಮಂತ ಬಿಲಿಯನೇರ್ ಎಲಾನ್ ಮಸ್ಕ್ ಅಲ್ಲಗಳೆದಿದ್ದಾರೆ.
ಒಂದು ವೇಳೆ ಲೈಂಗಿಕ ಕಿರುಕುಳ ನೀಡಿದ್ದೇನೆ ಎಂದು ಆಕೆ ವಾದಿಸುವುದೇ ಆದರೆ ಸಾರ್ವಜನಿಕವಾಗಿ ಕಾಣದ ನನ್ನ ದೇಹದಲ್ಲಿನ ಮಚ್ಚೆ ಬಗ್ಗೆ ಹೇಳಲಿ ಎಂದು ಮಸ್ಕ್ ಸವಾಲು ಹಾಕಿದ್ದಾರೆ.
ಈ ಸವಾಲಿನ ಮೂಲಕ 2016ರಲ್ಲಿ ನಡೆದಿತ್ತು ಎನ್ನಲಾದ ಲೈಂಗಿಕ ಕಿರುಕುಳ ಆರೋಪವನ್ನು ಮಸ್ಕ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಖಾಸಗಿ ವಿಮಾನದಲ್ಲಿ ಬೆತ್ತಲೆಯಾಗುವಂತೆ, ಕಾಮೋದ್ರೇಕ ಮಸಾಜ್ ಮಾಡುವಂತೆ ಒತ್ತಾಯಿಸಿದ್ದಾರೆ. ಈ ವಿಷಯವನ್ನು ಹೊರಗೆ ಹೇಳದಂತೆ ಹಣದ ಆಮಿಷವನ್ನು ಒಡ್ಡಿದ್ದಾರೆ. ಈ ಬಗ್ಗೆ ಗೆಳತಿ ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಈ ಆರೋಪವನ್ನು ಅಲ್ಲಗಳೆದಿರುವ ಮಸ್ಕ್, ಆರೋಪಿತರಿಗೆ ಓಪನ್ ಚಾಲೆಂಜ್ ಹಾಕುವೆ. ಆಕೆ ನನ್ನನ್ನು ಬೆತ್ತಲೆ ನೋಡಿದ್ದರೆ ನನ್ನ ದೇಹದ ಮೇಲಿನ, ಸಾರ್ವಜನಿಕವಾಗಿ ತೋರಿಸದ ಯಾವುದಾದರೂ ಮಚ್ಚೆ/ಗುರುತನ್ನು ಹೇಳಲಿ. ಆಕೆ ನನ್ನ ದೇಹದ ಮೇಲಿನ ಗುರುತು ಹೇಳಲು ಸಾಧ್ಯವಿಲ್ಲ. ಏಕೆಂದರೆ ನಾನು ಆಕೆಯ ಎದುರು ಬೆತ್ತಲೆಯಾಗಿಲ್ಲ. ಅಷ್ಟಕ್ಕೂ ಇಂತಹದೊಂದು ಘಟನೆ ನಡೆದೇ ಇಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್
Follow Us