ಅಮೆರಿಕ: ಇದು ಇ-ಯುಗ. ಪೈಪೋಟಿ ಭೂಮಿ ಮೇಲೆ ಮಾತ್ರವಲ್ಲ, ಬಾಹ್ಯಾಕಾಶದಲ್ಲೂ ಇಂತಹದೊಂದು ಮೇಲಾಟ ನಡೆದಿದೆ ಎಂದು ಹೇಳಲಾಗಿದೆ.
ಭೂಕಕ್ಷೆಯ ಸನಿಹದಲ್ಲಿ ಅಮೆರಿಕ ಹಾಗೂ ರಷ್ಯಾ ಬಾಹ್ಯಾಕಾಶ ನೌಕೆಗಳು ಅತಿ ಸನಿಹದಲ್ಲಿ ಹಾದು ಹೋಗಿರುವುದು ಅನುಮಾನ ಹುಟ್ಟುವಂತೆ ಮಾಡಿದೆ. ಎರಡೂ ದೇಶಗಳ ಬಾಹ್ಯಾಕಾಶ ನೌಕೆಗಳ ನಡುವೆ 150 ರಿಂದ 300 ಕಿಮೀ ಅಂತರವಿತ್ತು ಎಂದು ಬಾಹ್ಯಾಕಾಶ ತಜ್ಞರು ಹೇಳಿದ್ದಾರೆ.
ಅಮೆರಿಕದ ಯುಎಸ್ 245 ಬಾಹ್ಯಾಕಾಶ ಗೂಢಚರ್ಯ ನೌಕೆ ರಷ್ಯಾದ ಕಾಸ್ಮೋಸ್ 2542 ನೌಕೆಯ ಬಗ್ಗೆ ಯಾವುದೇ ನಕಾರಾತ್ಮಕ ಕ್ರಿಯೆ ನಡೆಸಿಲ್ಲ ಎಂದು ರಾಷ್ಟ್ರೀಯ ವಿಚಕ್ಷಣ ಕಚೇರಿ ಖಾತರಿಪಡಿಸಿದೆ.
ಉಭಯ ದೇಶಗಳ ಬಾಹ್ಯಾಕಾಶ ನೌಕೆಗಳು ಪರಸ್ಪರ ಗೂಢಚರ್ಯೆ ನಡೆಸಿರುವ ಯಾವುದೇ ಸೂಚನೆಗಳಿಲ್ಲ ಎಂದು ಉಪಗ್ರಹ ತಜ್ಞ ಮೈಕೆಲ್ ಥಾಮ್ಸನ್ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಪೈಪೋಟಿ ನಡೆದರೂ ಬೇರಾವುದೇ ರೀತಿಯ ತೊಂದರೆಗಳಿಲ್ಲ ಎಂದು ಹೇಳಲಾಗಿದೆ.