newsics.com
ನವದೆಹಲಿ: ಶುಲ್ಕ ಪಾವತಿಸಿಲ್ಲವೆಂದು ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ಕಲ್ಪಿಸುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಿರುವ ನ್ಯಾಯಪೀಠ, 30 ಸಾವಿರ ರೂ. ಶುಲ್ಕ ಪಾವತಿಸುವಂತೆ ವಿದ್ಯಾರ್ಥಿಗೆ ನಿರ್ದೇಶಿಸಿದೆ. ವಿದ್ಯಾರ್ಥಿಗೆ ನಾಲ್ಕು ವಾರಗಳ ಕಾಲಾವಕಾಶವನ್ನೂ ನೀಡಿದೆ.
ಖಾಸಗಿ ಶಾಲೆಯೊಂದು 10ನೇ ತರಗತಿ ವಿದ್ಯಾರ್ಥಿಯೊಬ್ಬ ಶುಲ್ಕ ಕಟ್ಟಿಲ್ಲವೆಂದು ಬೋರ್ಡ್ ಪರೀಕ್ಷೆಯಿಂದ ಹೊರಗಿಟ್ಟಿತ್ತು. ಶಾಲಾ ಆಡಳಿತ ಮಂಡಳಿಯ ಈ ಕ್ರಮ ಪ್ರಶ್ನಿಸಿ ವಿದ್ಯಾರ್ಥಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರಣ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸುವುದು ವಿದ್ಯಾರ್ಥಿಯ ಹಕ್ಕಿನ ಉಲ್ಲಂಘನೆ. ಶೈಕ್ಷಣಿಕ ವರ್ಷದ ನಡುವೆಯೇ ಆತನ ಮೇಲೆ ಈ ರೀತಿಯ ನಿರ್ಬಂಧ ಹೇರಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ಶಬರಿಮಲೆಗೆ ಭಕ್ತರು ನೀಡಿದ ಹಣ ಮಣ್ಣು ಪಾಲು ಆರೋಪ: ವರದಿ ಕೇಳಿದ ಹೈಕೋರ್ಟ್
ರಾಮ ಸೇತು ರಾಷ್ಟ್ರೀಯ ಸ್ಮಾರಕ ಘೋಷಣೆ ಪ್ರಕ್ರಿಯೆ ಆರಂಭ: ಸುಪ್ರೀಂ ಕೋರ್ಟ್ ಗೆ ಕೇಂದ್ರದ ಮಾಹಿತಿ