Tuesday, April 13, 2021

ಭಾರತೀಯ ಯೋಧರ ನಿವೃತ್ತಿ ವಯಸ್ಸು ವಿಸ್ತರಣೆ

ನವದೆಹಲಿ: ಸೈನಿಕರ ನಿವೃತ್ತಿ ವಯಸ್ಸು ವಿಸ್ತರಣೆಯಾಗಲಿದೆ.
ಇದರಿಂದ ಮೂರೂ ಪಡೆಗಳ ಸುಮಾರು 15 ಲಕ್ಷ ಪುರುಷರಿಗೆ ಲಾಭವಾಗಲಿದೆ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜ.ಬಿಪಿನ್ ರಾವತ್ ಅವರು ತಿಳಿಸಿದ್ದಾರೆ.
ಸೇನೆಯ ಯೋಧರು, ಭಾರತೀಯ ವಾಯುಪಡೆಯಲ್ಲಿಯ ಏರ್‌ಮನ್‌ಗಳು ಮತ್ತು ಭಾರತೀಯ ನೌಕಾಪಡೆಯ ನಾವಿಕರ ನಿವೃತ್ತಿ ವಯೋಮಾನವು ವಿಸ್ತರಣೆಯಾಗಲಿದೆ.
ಮಾನವ ಶಕ್ತಿ ವೆಚ್ಚವನ್ನು ಕಡಿತಗೊಳಿಸುವ ಬಗ್ಗೆ ನಾನು ಪರಿಶೀಲಿಸುತ್ತಿದ್ದೇನೆ. ಯೋಧನೊಬ್ಬ 15 ಅಥವಾ 17 ವರ್ಷ ಮಾತ್ರ ಸೇವೆ ಸಲ್ಲಿಸುವ ಬದಲು ಆತ 30 ವರ್ಷಗಳ ಸೇವೆ ಸಲ್ಲಿಸುವಂತಾಗಬೇಕು. ಬೇಗ ನಿವೃತ್ತಿಯೊಂದಿಗೆ ನುರಿತ ಮಾನವ ಶಕ್ತಿಯನ್ನು ನಾವು ಕಳೆದುಕೊಳ್ಳುತ್ತಿದೇವೆ ಎಂದು ರಾವತ್ ಹೇಳಿದ್ದಾರೆ.
ಮುಂಚೂಣಿಯ ಹೋರಾಟದಲ್ಲಿ ಯುವಜನರೇ ಇರುತ್ತಾರೆ. ನಾವು ಆರ್ಮಿ ಮೆಡಿಕಲ್ ಕಾರ್ಪ್ಸ್ ಹೊಂದಿದ್ದೇವೆ. ನರ್ಸಿಂಗ್ ಸಹಾಯಕರು 50 ವರ್ಷದವರೆಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 5500 ಕೊರೋನಾ ಸೋಂಕು, ರಾಜ್ಯದಲ್ಲಿ 8778 ಪ್ರಕರಣ, 67 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಯುಗಾದಿ ದಿನದಂದು ಕೂಡ ಕೊರೋನಾ ಅಬ್ಬರ ಮುಂದುವರಿದಿದೆ. ರಾಜ್ಯದಲ್ಲಿ ಹೊಸದಾಗಿ 8778 ಮಂದಿಗೆ ಕೊರೋನಾ ಸೋಂಕು ತಗುಲಿದೆ.  ಬೆಂಗಳೂರಿನಲ್ಲಿ ಹೊಸದಾಗಿ 5500 ಕೊರೋನಾ...

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ ನಿವಾಸಿ 58 ಡಯಾಲಿಸಿಸ್'ಗೆ ಬಂದಿದ್ದ ಮಹಿಳೆಗೆ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...
- Advertisement -
error: Content is protected !!