ನವದೆಹಲಿ: ದೇಶಾದ್ಯಂತ ಜೂನ್ 30ರವರೆಗೆ ಲಾಕ್’ಡೌನ್ ವಿಸ್ತರಣೆಯಾಗಿದೆ. ಈ ಸಂಬಂಧ ಗೃಹಸಚಿವಾಲಯ ಆದೇಶ ಹೊರಡಿಸಿದೆ. ಲಾಕ್ ಡೌನ್ 4.0 ನಾಳೆ ಮುಗಿಯಲಿದ್ದು, ಜೂನ್ 1 ರಿಂದ ಲಾಕ್ ಡೌನ್ 5.0 ಜಾರಿಗೆ ಬರಲಿದೆ. ಕಂಟೇನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿ ಜೂನ್ 8ರಿಂದ ಧಾರ್ಮಿಕ ಸ್ಥಳಗಳು, ಮಾಲ್, ಹೋಟೆಲ್, ರೆಸ್ಟೋರೆಂಟ್ ಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಶಾಲಾ-ಕಾಲೇಜು ಪುನರಾರಂಭದ ಬಗ್ಗೆ ಕೇಂದ್ರ ಸರ್ಕಾರ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದೆ.
ಜೂನ್ 30ರವರೆಗೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇನ್ನು ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅನುಮತಿ ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.