ವಾಷಿಂಗ್ಟನ್: ಸೋಶಿಯಲ್ ನೆಟ್‍ವರ್ಕಿಂಗ್ ಜನಪ್ರಿಯತೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಹಾಗೂ ಪ್ರಧಾನಿ ನರೇಂದ್ರ ಮೋದಿ 2ನೇ ಸ್ಥಾನದಲ್ಲಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ವಿಷಯವನ್ನು ಟ್ವಿಟರ್‍ನಲ್ಲಿ ಬಹಿರಂಗಪಡಿಸಿದ್ದು, ಮೊದಲ ಸ್ಥಾನದಲ್ಲಿರುವುದಕ್ಕೆ ಸಂತಸವಾಗಿದೆ ಎಂದಿದ್ದಾರೆ. ನಾವಿಬ್ಬರೂ ಆಪ್ತ ಗೆಳೆಯರು. ಫೇಸ್‍ಬುಕ್ ಜನಪ್ರಿಯತೆಯಲ್ಲಿ ಮೊದಲ ಎರಡು ಸ್ಥಾನಗಳು ನಮ್ಮಬ್ಬಿರಿಗೇ ಲಭಿಸಿರುವುದು ಸಂತಸದ ಸಂಗತಿ ಎಂದು ಟ್ರಂಪ್ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.
ಫೇಸ್‍ಬುಕ್ ಸಂಸ್ಥಾಪಕ, ಸಿಇಒ ಮಾರ್ಕ್ ಜುಕರ್‍ಬರ್ಗ್ ಅವರಿಗೆ ಕೃತಜ್ಞತೆ ಸಲ್ಲಿಸಿ, ಭಾರತ ಭೇಟಿಗೂ ಮುನ್ನವೇ ಫೇಸ್‍ಬುಕ್‍ನಲ್ಲಿ ನಮ್ಮಿಬ್ಬರ ಜನಪ್ರಿಯತೆ ಅನುಕ್ರಮವಾಗಿ ಮೊದಲ ಮತ್ತು 2ನೇ ಸ್ಥಾನದಲ್ಲಿರುವುದು ಖುಷಿಯ ಸಂಗತಿ ಎಂದಿದ್ದಾರೆ.
ಫೇಸ್ಬುಕ್ ಜನಪ್ರಿಯತೆ; ಟ್ರಂಪ್ ನಂ.1, ಮೋದಿ ಸೆಕೆಂಡ್
Follow Us