newsics.com
ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಮತ್ತು ಕಾರ್ಮಿಕ ವಿರೋದಿ ನೀತಿ ವಿರೋಧಿಸಿ ಸೆ.28 ರಂದು ಕರ್ನಾಟಕ ಬಂದ್ಗೆ ರಾಜ್ಯ ರೈತ ಸಂಘ ಕರೆ ನೀಡಿದ್ದು, ಸೆ.25 ರಂದು ಸಾಂಕೇತಿಕ ಪ್ರತಿಭಟನೆ ಮಾಡಲಾಗುವುದು ಎಂದು ಸಂಘ ಹೇಳಿದೆ.
ಸೆ.28 ರಂದು ಬಂದ್ ನಡೆಸುವ ಕುರಿತು ಅಖಿಲ ಭಾರತ ಕೃಷಿ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಇದಕ್ಕೆ 9 ಕ್ಕೂ ಹೆಚ್ಚು ರೈತ ಸಂಘಟನೆಗಳು, 10 ದಲಿತ ಸಂಘಟನೆಗಳು ಹಾಗೂ ಹಲವು ಕಾರ್ಮಿಕ ಸಂಘಟನೆಗಳು ಈ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಸಿದ್ಧತೆಗೆ ಕಾಲಾವಕಾಶ ಬೇಕಾಗಿರೋದರಿಂದ ಸೆ.28 ರಂದು ರಾಜ್ಯ ಬಂದ್ ನಡೆಸಲು ನಿರ್ಧರಿಸಲಾಗಿದೆ. 25 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಧರಣಿ, ರಸ್ತೆ ತಡೆ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ ಹೇಳಿದ್ದಾರೆ.
ಇನ್ನು ಸೆ.25 ಮತ್ತು 28 ರ ಪ್ರತಿಭಟನೆ ಕುರಿತು ರೈತ ಸಂಘಟನೆಗಳಲ್ಲೇ ಗೊಂದಲವಿದ್ದು, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸೆ.25 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದರೇ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್, ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಸೆ.25 ರಂದು ಜೈಲ್ ಭರೋ ಚಳುವಳಿ ನಡೆಯಲಿದೆ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ. ಅಲ್ಲದೇ ಸೆ.28 ರಂದು ಬಂದ್ ನಡೆಸುವ ನಿರ್ಧಾರ ಇನ್ನೂ ಅಂತಿವiವಾಗಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಕೇಂದ್ರದ ಕೃಷಿ ಕಾನೂನು ರಾಜ್ಯದಲ್ಲಿ ಪ್ರತಿಭಟನೆಯ ಕಾವು ಹುಟ್ಟಿಸಿದ್ದು, ಯಾವ ಸ್ವರೂಪದಲ್ಲಿ ಹೋರಾಟ ನಡೆಯಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಸೆ.28 ಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಿದ ರಾಜ್ಯ ರೈತ ಸಂಘ
Follow Us