Wednesday, July 6, 2022

ಕೃಷಿಕರು ಬೇಕಾಗಿದ್ದಾರೆ… ಹೀಗೊಂದು ಅಪರೂಪದ ಜಾಹೀರಾತು!

Follow Us

♦ ತರಬೇತಿ, ಊಟ, ವಸತಿ ಫ್ರೀ ಎಂದ ಟೆಕ್ಕಿ ಗುಂಪು

ಮಂಡ್ಯ: ಇಂಜಿನಿಯರ್ ಬೇಕಾಗಿದ್ದಾರೆ…ಡಾಕ್ಟರ್ ಬೇಕಾಗಿದ್ದಾರೆ…ಸೇಲ್ಸ್ ಬಾಯ್ ಬೇಕಾಗಿದ್ದಾರೆ… ಹೀಗೆ ಹತ್ತಾರು ಬಗೆಯ ಜಾಹೀರಾತು ನೀವು ನೋಡಿರುತ್ತೀರಿ. ಆದರೆ ಈ ಟೆಕ್ಕಿಗಳ ಗುಂಪು ಮಾತ್ರ ಅನ್ನದಾತರನ್ನೇ ಕೆಲಸಕ್ಕೆ ಆಹ್ವಾನಿಸಿದೆ!
ರೈತರನ್ನು ಕೆಲಸಕ್ಕೆ ಕರೆದಿರುವ ಸಂಸ್ಥೆ ಇದಕ್ಕಾಗಿ ಅನ್ನದಾತರಿಗೆ ಊಟ-ವಸತಿ ಜತೆ ಸಂಬಳದ ಆಫರ್ ನೀಡಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದ ಸಾಫ್ಟ್‌ವೇರ್ ಯುವಕರ ತಂಡ ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ.
ಸಾಫ್ಟವೇರ್ ಬದಿಗಿಟ್ಟು ಹಳ್ಳಿ‌ ಬದುಕಿಗೆ ಮರಳಿರುವ ಸ್ಥಳೀಯ ಯುವಕರು ಗ್ರಾಸ್ ರೂಟ್ ಆರ್ಗ್ಯಾನಿಕ್ ಹೆಸರಲ್ಲಿ ಎತ್ತಿನ ಗಾಣದಿಂದ‌ ಅಡುಗೆ ಎಣ್ಣೆ ತೆಗೆಯುವ ಘಟಕ ತೆರೆದಿದ್ದಾರೆ. ಸ್ಥಳೀಯ ಯುವಕ ಸಾಫ್ಟ್​ವೇರ್ ಉದ್ಯೋಗಿ ಕಮಲೇಶ್ ಹಾಗೂ ಆತನ ಐವರು ಸಹೋದ್ಯೋಗಿಗಳು ಈ ಹೊಸ ಉದ್ಯಮ ಆರಂಭಿಸಿದ್ದು, ಇದರೊಂದಿಗೆ ಸಾವಯುವ ಬೆಲ್ಲ, ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಜನರಿಗೆ ನೇರವಾಗಿ ತಲುಪಿಸುವ ಯೋಜನೆ ರೂಪಿಸಿದ್ದಾರೆ.
ತರಬೇತಿ, ಊಟ, ವಸತಿ ಫ್ರೀ:
ತಮ್ಮ ಈ ಪ್ರಯತ್ನಕ್ಕೆ ಅಗತ್ಯವಿರುವ ರೈತರನ್ನು ಕೆಲಸಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿರುವ ತಂಡ, 30ಕ್ಕೂ ಹೆಚ್ಚು ರೈತರನ್ನು ಆಹ್ವಾನಿಸಿದ್ದು, ಇದಕ್ಕಾಗಿ ತಮ್ಮ ವೆಬ್ ಸೈಟ್ ನಲ್ಲಿ ಜಾಹೀರಾತು ಪೋಸ್ಟ್ ಮಾಡಿದೆ. ಅಲ್ಲದೇ, ಇಲ್ಲಿಗೆ ಬರುವ ರೈತರಿಗೆ ತರಬೇತಿ ನೀಡಿ ಊಟ, ವಸತಿ ಜತೆಗೆ ಅವರ ಕೆಲಸಕ್ಕೆ ತಕ್ಕಂತೆ ವೇತನ ನೀಡುವುದಾಗಿ ಹೇಳಿಕೊಂಡಿದೆ.
ಸಾವಯವ ಕೃಷಿಕರಿಗೆ ಆದ್ಯತೆ:
ಈ ಸಾಫ್ಟ್‌ವೇರ್ ಉದ್ಯೋಗಿಗಳು ಆರಂಭಿಸಿರುವ ಈ ಹೊಸ ಉದ್ಯಮದಲ್ಲಿ ಕಡಲೆಕಾಯಿ, ಉಚ್ಛೆಳ್ಳು, ಕೊಬ್ಬರಿ ಸೇರಿದಂತೆ ವಿವಿಧ ಕಾಳುಗಳಿಂದ ಎಣ್ಣೆ ತೆಗೆಯವ ಕೆಲಸ ನಡೆಯುತ್ತಿದ್ದು, ಎಲ್ಲವನ್ನೂ ಯಾವುದೇ ಯಂತ್ರದ ಸಹಾಯವಿಲ್ಲದೆ ಕೇವಲ ಎತ್ತಿನ ಗಾಣದಿಂದ ತಯಾರಿಸಲು ಮುಂದಾಗಿದ್ದಾರೆ. ಇಲ್ಲಿಗೆ ಬರುವ ರೈತರಿಗೆ ಸಾವಯವ ಕೃಷಿಯ ಪ್ರಾಥಮಿಕ‌ ಜ್ಞಾನದ ಜತೆ ಅವರ ಅನುಭವ ವಿದ್ಯಾರ್ಹತೆ ಮೇಲೆ ಕೆಲಸಗಳ ವಿಗಂಡಣೆಯಾಗಲಿದೆ.

ಕೃಷಿ ಭೂಮಿಯಲ್ಲಿದ್ದ ಮೊಸಳೆ ರಕ್ಷಣೆ

ಒಟ್ಟಾರೆ, ಕೊರೋನಾ ಸಂಕಷ್ಟದ ಕಾಲದಲ್ಲೂ ಕೆಲಸ ತೆಗೆಯುವ ಕಂಪನಿಗಳ ನಡುವೆ ಇದೀಗ ಯುವ ಸಾಫ್ಟ್‌ವೇರ್ ಉದ್ಯೋಗಿಗಳ ತಂಡ ತಮ್ಮ ಹೊಸ ಉದ್ಯಮದ ಮೂಲಕ ರೈತರಿಗೆ ಕೆಲಸ ಕೊಡಲು ಮುಂದಾಗಿರುವುದು ಮಾತ್ರ ಅನುಕರಣೀಯ.

ಮತ್ತಷ್ಟು ಸುದ್ದಿಗಳು

vertical

Latest News

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ, ...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...
- Advertisement -
error: Content is protected !!