Tuesday, January 19, 2021

ಕೆರೆಯಲ್ಲಿ ಮುಳುಗಿ ಐವರು ಯುವಕರ ಜಲಸಮಾಧಿ

Newsics.com

ಚಿಕ್ಕಮಗಳೂರು: ಮಂಗಳೂರು ಸಮೀಪದ ಮೂಡಬಿದ್ರೆಯಲ್ಲಿನ ದುರಂತ ಮಾಸುವ ಮುನ್ನವೇ ಅದೇ ರೀತಿಯ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದೆ.

ಕೆರೆಯಲ್ಲಿ ಈಜಲು ಹೋದ ಐವರು ಯುವಕರು ಜಲ ಸಮಾಧಿಯಾಗಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ವಸ್ತಾರೆಯಲ್ಲಿ ಈ ಮನ ಕಲುಕುವ ಘಟನೆ ನಡೆದಿದೆ.

ಸಂದೀಪ್ ಎಂಬ ಯುವಕನ ಅಕ್ಕನ ಮದುವೆ ಮಂಗಳವಾರ ನಡೆದಿತ್ತು. ಈ ಮದುವೆಗೆ ಸಂದೀಪ್ ತಮ್ಮ ಸ್ನೇಹಿತರನ್ನು ಆಮಂತ್ರಿಸಿದ್ದರು. ಇಂದು ಹತ್ತಿರದಲ್ಲಿರುವ ಕೆರೆಗೆ ಸ್ನೇಹಿತರೆಲ್ಲ ಈಜಲು ತೆರಳಿದ್ದರು.

ಈ ಸಂದರ್ಭದಲ್ಲಿ ಸಂದೀಪ್ ನ ಒಬ್ಬ ಸ್ನೇಹಿತ ನೀರಿನಲ್ಲಿ ಮುಳುಗಿದ. ಆವನನ್ನು ರಕ್ಷಿಸಲು ಉಳಿದವರು ಪ್ರಯತ್ನಿಸಿದರು. ಕೆರೆಯಲ್ಲಿ ಸುಮಾರು 15 ಅಡಿಗಳಷ್ಟು ನೀರು ಇತ್ತು. ಆದರೆ ಯಾರೂ ಕೂಡ ನೀರಿನಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ಎಲ್ಲರೂ ಅಲ್ಲಿಯೇ ಜಲಸಮಾಧಿಯಾದರು.

ಮೃತಪಟ್ಟ ಎಲ್ಲರೂ ಯುವಕರಾಗಿದ್ದಾರೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕ ಆವರಿಸಿದೆ. ದುರಂತಕ್ಕೆ ಇಡೀ ಗ್ರಾಮವೇ ಕಣ್ಣೀರು ಹಾಕುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

ಕಬ್ಬನ್’ಪಾರ್ಕ್’ನಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣ ಕಾರ್ಯ ಆರಂಭ

newsics.com ಬೆಂಗಳೂರು: ಸುಮಾರು ಒಂದು ವರ್ಷದ ನಂತರ ಕಬ್ಬನ್ ಪಾರ್ಕ್‌ನಲ್ಲಿ ಸ್ಮಾರ್ಟ್ ಸಿಟಿ ಕೆಲಸ ಭಾನುವಾರ (ಜ.17) ಪ್ರಾರಂಭವಾಗಿದೆ. ಸದ್ಯ ಉದ್ಯಾನವನದ ಮೂಲಕ 4 ಕಿ.ಮೀ ನಡಿಗೆ...

ಮಾರ್ಚ್‌ ಮೊದಲ ವಾರ ಬಜೆಟ್- ಸಿಎಂ

newsics.com ಕುಂದಾಪುರ(ಉಡುಪಿ): ಮಾರ್ಚ್‌ ಮೊದಲ ವಾರ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.ಕುಂಭಾಶಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮಂಗಳವಾರ ಗಣಹೋಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಡುಪಿಯ ಧಾರ್ಮಿಕ ಪ್ರವಾಸದಲ್ಲಿ ಸಕಾಲಕ್ಕೆ...

ಸಸ್ಯಾಹಾರಿಗಳಿಗೆ ಕೊರೋನಾ ಸೋಂಕಿನ ಅಪಾಯ ಕಡಿಮೆ-ವರದಿ

newsics.com ನವದೆಹಲಿ: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತನ್ನ ಸುಮಾರು 40 ಸಂಸ್ಥೆಗಳಲ್ಲಿ ನಡೆಸಿದ ಹೊಸ ಸಮೀಕ್ಷೆಯಲ್ಲಿ, ಧೂಮಪಾನಿಗಳು ಮತ್ತು ಸಸ್ಯಾಹಾರಿಗಳಲ್ಲಿ ಕಡಿಮೆ ಸಿರೊಪೊಸಿಟಿವಿಟಿ ಹೊಂದಿರುವುದು ಕಂಡುಬಂದಿದ್ದು, ಅವರು ಕೊರೋನಾವೈರಸ್...
- Advertisement -
error: Content is protected !!