newsics.com
ಮಾಲ್ಡೀವ್ಸ್: ಪರಿಸರದ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ಸಮುದ್ರ ಮಟ್ಟಗಳ ಮಧ್ಯೆ, ಹಿಂದೂ ಮಹಾಸಾಗರದ ಮಾಲ್ಡೀವ್ಸ್‌ನ ನಗರದಿಂದ ಕೇವಲ 10 ನಿಮಿಷಗಳ ದೋಣಿ ವಿಹಾರದಲ್ಲಿ ತೇಲುವ ನಗರವನ್ನು ನಿರ್ಮಿಸಲಾಗುತ್ತಿದೆ.
ಸಿಎನ್‌ಎನ್ ವರದಿ ಪ್ರಕಾರ, ನಗರವನ್ನು ಮೆದುಳಿನ ಹವಳದಂತೆ ವಿನ್ಯಾಸಗೊಳಿಸಲಾಗುವುದು. ಇದು ಮನೆಗಳು, ರೆಸ್ಟೋರೆಂಟ್‌ಗಳು, ಅಂಗಡಿಗಳು ಮತ್ತು ಶಾಲೆಗಳು ಸೇರಿದಂತೆ 5,000 ತೇಲುವ ಘಟಕಗಳನ್ನು ಒಳಗೊಂಡಿರುತ್ತದೆ.
ಮೊದಲ ಘಟಕಗಳನ್ನು ಜೂನ್ ತಿಂಗಳಲ್ಲಿ ಅನಾವರಣಗೊಳಿಸಲಾಗುವುದು,ಇಡೀ ನಗರವು 2027 ರ ವೇಳೆಗೆ ಪೂರ್ಣಗೊಳ್ಳಲಿದೆ.
ಮಾಲ್ಡೀವ್ಸ್ ಫ್ಲೋಟಿಂಗ್ ಸಿಟಿಯನ್ನು ಡಚ್ ವಾಟರ್‌ಸ್ಟುಡಿಯೋ ಸಂಸ್ಥೆ ಮತ್ತು ಮಾಲ್ಡೀವ್ಸ್ ಸರ್ಕಾರವು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಐದು ವರ್ಷಗಳಲ್ಲಿ 20,000 ಜನರಿಗೆ ವಸತಿ ಕಲ್ಪಿಸುವ ಗುರಿ ಹೊಂದಿದೆ. ಇದು ವಿಶ್ವದ ಎರಡನೇ ತೇಲುವ ನಗರವಾಗಲಿದೆ.