Wednesday, May 31, 2023

ಓಲಾ ‌ಕ್ಯಾಬ್ ನಲ್ಲಿ ವಿದೇಶಿ ಯುವತಿಗೆ ಲೈಂಗಿಕ ಕಿರುಕುಳ, ಬೆತ್ತಲೆಗೊಳಿಸಿ ಅಟ್ಟಹಾಸ

Follow Us

ಬೆಂಗಳೂರು: ಚಿಕಿತ್ಸೆಗೆಂದು ಬಂದಿದ್ದ ಉಗಾಂಡ ಮೂಲದ ಯುವತಿಗೆ ಓಲಾ ಕ್ಯಾಬ್ ಚಾಲಕ ಹಾಗೂ ಸ್ನೇಹಿತರು ಲೈಂಗಿಕ ಕಿರುಕುಳ ನೀಡಿ, ಬೆತ್ತಲೆಗೊಳಿಸಿ ಕಾರಿನಿಂದ ಹೊರದಬ್ಬಿದ ಪ್ರಕರಣ ನಗರದ ಹೊರವಲಯದಲ್ಲಿ ನಡೆದಿದೆ.
ಈ ಬಗ್ಗೆ ಸಂತ್ರಸ್ತ ಯುವತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.
ಜ.16ರಂದೇ ಈ ‌ಘಟನೆ ನಡೆದಿದೆ. ಉಗಾಂಡ ಮೂಲದ 25 ವರ್ಷದ ಸಂತ್ರಸ್ತ ಯುವತಿ ದೆಹಲಿಯಿಂದ ಕಿಡ್ನಿ ಸಂಬಂಧಿತ ಕಾಯಿಲೆಗೆ ನಗರದ ಕಮ್ಮನಹಳ್ಳಿಯಲ್ಲಿರುವ ಸಿಟಿಲೈನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದರು. ಚಿಕಿತ್ಸೆ ಪಡೆದ ನಂತರ ಸ್ನೇಹಿತರ ಮನೆಗೆ ಹೋಗಲು ಕಮ್ಮನಹಳ್ಳಿಯಿಂದ ಯುವತಿ ರಾತ್ರಿ 10ಕ್ಕೆ ಓಲಾ ಕ್ಯಾಬ್ ಬುಕ್‌ ಮಾಡಿದ್ದರು.
ಓಲಾ ಕ್ಯಾಬ್‌ ಚಾಲಕ ಆಕೆಯನ್ನು ಕಾರಿಗೆ ಹತ್ತಿಸಿಕೊಂಡ ಕೆಲ ಸಮಯದಲ್ಲಿ ಸಹ ಪ್ರಯಾಣಿಕರ ಸೋಗಿನಲ್ಲಿ ಇಬ್ಬರು ಯುವಕರು ಕಾರು ಹತ್ತಿದ್ದಾರೆ. ಯುವತಿಗೆ ಗೊತ್ತಾಗದಂತೆ ಹೊರವಲಯಕ್ಕೆ ಕರೆದೊಯ್ದು ರಾತ್ರಿಯಿಡೀ ಸುತ್ತಾಡಿಸಿದ್ದಾರೆ. ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಚಾಕುವಿನಿಂದ ಹೆದರಿಸಿ ಆಕೆಯ ಬಳಿಯಿದ್ದ ಮೊಬೈಲ್, ಪರ್ಸ್ ಹಾಗೂ ಹಣ ಕಿತ್ತುಕೊಂಡಿದ್ದಾರೆ.
ಜ17ರ ಮುಂಜಾನೆ 4.15ರ ಸುಮಾರಿಗೆ ದೊಡ್ಡಬಳ್ಳಾಪುರ ಸಮೀಪದ ಆಲಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಬೆತ್ತಲೆ ಮಾಡಿ, ಕಾರಿನಿಂದ ನೂಕಿ ಪರಾರಿಯಾಗಿದ್ದಾರೆ. ಯುವತಿ ಸಮೀಪದ ತೋಟದ ಮನೆಗೆ ತೆರಳಿ ಸಹಾಯ ಕೇಳಿದ್ದು, ಅಲ್ಲಿದ್ದವರು ಆಕೆಗೆ ಬಟ್ಟೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಇಂದು ಏಕಕಾಲಕ್ಕೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

newsics.com ಹಾವೇರಿ/ತುಮಕೂರು/ಶಿವಮೊಗ್ಗ: ಇಂದು(ಮೇ 31) ಬೆಳ್ಳಂಬೆಳಗ್ಗೆ ಹಾವೇರಿ, ತುಮಕೂರು ಹಾಗೂ ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿರುವ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆ...

ಜೂನ್ 4 ರವರೆಗೆ ರಾಜಧಾನಿಯಲ್ಲಿ ಭಾರಿ ಮಳೆ: 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

newsics.com ಬೆಂಗಳೂರು: ಬೆಂಗಳೂರಿನಲ್ಲಿ ಜೂನ್ 4ರವರೆಗೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು...

ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ನಿಂದ 4 ವಾರಗಳ ತಾತ್ಕಾಲಿಕ ರಿಲೀಫ್

newsics.com ಬೆಂಗಳೂರು: ಟಿಪ್ಪು ರೀತಿ ಸಿದ್ದರಾಮಯ್ಯರನ್ನು ಮುಗಿಸಬೇಕು ಎಂದಿದ್ದ ಮಾಜಿ ಮಂತ್ರಿ ಅಶ್ವಥ್‍ ನಾರಾಯಣ್‍ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಮೈಸೂರಿನ ದೇವರಾಜ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ ರದ್ದತಿಗೆ ನಿರ್ದೇಶನ ನೀಡುವಂತೆ ಕೋರಿ ಅಶ್ವಥ್‍ನಾರಾಯಣ್...
- Advertisement -
error: Content is protected !!