ನವದೆಹಲಿ: ವಿದೇಶಿ ಪೀಠೋಪಕರಣ ಹಾಗೂ ಕೆಲ ಬಗೆಯ ಹರಳು, ಟೈರುಗಳ ಆಮದನ್ನು ಕೇಂದ್ರ ಸರ್ಕಾರ ನಿಷೇಧಿಸಲಿದೆ.
ಅಗ್ಗದ ಸರಕುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ದೇಶೀಯ ಉತ್ಪಾದಕ ಕಂಪನಿಗಳನ್ನು ಪ್ರೋತ್ಸಾಹಿಸಲು ರಿಟ್ರೇಡೆಡ್ ಟೈರುಗಳ ಆಮದನ್ನು ನಿಷೇಧಿಸಲು ನಿರ್ಧರಿಸಲಾಗಿದೆ.
ಆಮದು ನಿರ್ಬಂಧಿಸುವ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಉನ್ನತ ಮೂಲಗಳು ಹೇಳಿವೆ.
ನಿರ್ಬಂಧ ವಿಧಿಸಲು ಸರ್ಕಾರ ಈಗಾಗಲೇ 350 ಅನಗತ್ಯ ವಸ್ತುಗಳನ್ನು ಸರ್ಕಾರ ಪಟ್ಟಿ ಮಾಡಿದ್ದು, ಆಟಿಕೆಗಳು, ಎಲೆಕ್ಟ್ರಾನಿಕ್ಸ್, ಪಾದರಕ್ಷೆ, ಜವಳಿ ಉತ್ಪನ್ನಗಳು ಇದರಲ್ಲಿ ಸೇರಿವೆ.
ವಿದೇಶಿ ಟೈರ್, ಹರಳು ಆಮದು ನಿಷೇಧಕ್ಕೆ ಶೀಘ್ರ ಕ್ರಮ
Follow Us