newsics.com
ಕಲಬುರ್ಗಿ: ಕೊರೋನಾ ಸೋಂಕಿನಿಂದ ಹೈರಾಣಾಗಿರುವ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಅಕ್ಷರಶಃ ಕಣ್ಣೇರು ಹಾಕಿದ್ದಾರೆ.
ಮಾಜಿ ಸಚಿವ ಹಾಗೂ ಖ್ಯಾತ ಕುಸ್ತಿಪಟು ರೇವು ನಾಯಕ ಬೆಳಮಗಿ ಕೊರೋನಾದಿಂದ ಪಡಬಾರದ ಕಷ್ಟಪಡುತ್ತಿದ್ದಾರೆ. ಹಾಸಿಗೆಯಲ್ಲಿಯೇ ರೇವೂನಾಯಕ್ ಬೆಳಮಗಿ ಕಣ್ಣೀರು ಹಾಕಿದ್ದಾರೆ. ಗಂಟಲಿನಲ್ಲಿ ಉಸಿರು ಕಟ್ಟಿದಂತಾಗುತ್ತದೆ. ಎದೆಯಲ್ಲಿ ಉಸಿರು ನಿಂತಂತಾಗುತ್ತದೆ. ಭಯಂಕರ ತ್ರಾಸ್ ಆಗ್ತಿದೆ. ನನಗಾಗಿದ್ದು ಆಗಿದೆ, ನಿಮಗಾರಿಗೂ ಕೊರೋನಾ ಆಗಬಾರದು. ಕೈ ಜೋಡಿಸಿ ಕೇಳುತ್ತೇನೆ ಎಂದಿದ್ದಾರೆ.
ಯಾರೂ ನನ್ನ ಭೇಟಿ ಮಾಡಲು ಬರಬೇಡಿ. ಆ ದೇವಿಯಲ್ಲಿ ಪ್ರಾಥಿಸಿದ್ದೇನೆ. ಮನೆಯವರೂ ಎಲ್ಲ ದೇವರಲ್ಲಿ ಬೇಡಿಕೊಂಡಿದ್ದಾರೆ. ಎಲ್ಲರ ಆಶೀರ್ವಾದ ನನಗಿರಲಿ ಸಾಕು. ನೀವ್ಯಾರೂ ಮನೆಗೆ ಬರೋದು ಬೇಡವೆಂದು ಅಭಿಮಾನಿಗಳಿಗೆ ಬೆಳಮಗಿ ಕೈಮುಗಿದು ಮನವಿ ಮಾಡಿದ್ದಾರೆ.
ಕಲಬುರ್ಗಿಯ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ರೇವೂ ನಾಯಕ್, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಹತ್ತಾರು ಕುಸ್ತಿಪಟುಗಳನ್ನ ಕೆಡವಿದ ಗಂಡುಗಲಿಗೆ ಈಗ ಬೆಡ್ ರೆಸ್ಟ್ ಆಗಿದ್ದಾರೆ. ಕೊರೋನಾದಿಂದ ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಳಮಗಿ ಮನೆಗೆ ಬಂದಿದ್ದಾರೆ. ನೆಗೆಟಿವ್ ಬಂದ ನಂತರ ಡಿಸ್ಚಾರ್ಜ್ ಆಗಿ ಬಂದಿದ್ದರು. ಆದರೆ ಮನೆಗೆ ಬಂದ ನಂತರ ಬೆಳಮಗಿಗೆ ಮತ್ತೆ ತೀವ್ರ ಉಸಿರಾಟ ತೊಂದರೆಯಾಗಿದೆ ಎನ್ನಲಾಗಿದೆ. ಹೀಗಾಗಿ ಆಕ್ಸಿಜನ್ ನೆರವಿನೊಂದಿಗೆ ಕಲಬುರ್ಗಿಯಲ್ಲಿನ ತಮ್ಮ ನಿವಾಸದಲ್ಲಿಯೇ ರೇವುನಾಯಕ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಮನೆಗೆ ಬಂದು ಆರೋಗ್ಯ ವಿಚಾರಿಸುತ್ತಿದ್ದಾರೆ.
ನಿತ್ಯ ನೂರಾರು ಜನ ಬಂದು ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ಇದರಿಂದಾಗಿ ಅವರಿಗೂ ತೊಂದರೆಯಾಗಲಿದೆ. ಹೀಗಾಗಿ ಯಾರೂ ತಮ್ಮ ಮನೆಗೆ ಬರಬೇಡಿ ಎಂದು ಬೆಂಬಲಿಗರಿಗೆ ಮನವಿ ಮಾಡುವಾಗ ಗದ್ಗರಿತರಾಗಿ ಬೆಳಮಗಿ ಕಣ್ಣೀರು ಹಾಕಿದ್ದಾರೆ.
ಮಳೆ ಅಬ್ಬರಕ್ಕೆ ಕೊಪ್ಪಳ ಜನ ತತ್ತರ