newsics.com
ನವದೆಹಲಿ: ಜಾಗತಿಕ ತಾಪಮಾನ ಹಿನ್ನೆಲೆಯಲ್ಲಿ ಮಂಗಳೂರು ಸೇರಿ ದೇಶದ ಕರಾವಳಿ ತೀರಗಳಲ್ಲಿರುವ 12 ನಗರಗಳು ಈ ಶತಮಾನದ ಅಂತ್ಯಕ್ಕೆ ಮುಳುಗಡೆಯಾಗಲಿವೆ ಎಂದು ನಾಸಾ ಹೇಳಿದೆ.
ಜಾಗತಿಕ ತಾಪಮಾನದ ದುಷ್ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆಯ 195 ಪರಿಸರ ತಜ್ಞರ ಸಮಿತಿ ನೀಡಿರುವ ಎಚ್ಚರಿಕೆಯ ವರದಿಯನ್ನು (ಐಪಿಸಿಸಿ ವರದಿ) ಅವಲೋಕನ ಮಾಡಿರುವ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಭಾರತಕ್ಕೆ ಈ ಮುನ್ಸೂಚನೆ ನೀಡಿದೆ.
ನಾಸಾ ಮಾಹಿತಿಯ ಪ್ರಕಾರ, ಮಂಗಳೂರು, ಮುಂಬೈ, ಮರ್ಮಗೋವಾ ಕೊಚ್ಚಿ, ಪಾರಾದೀಪ್, ಖಿದೀರ್‌ಪುರ್, ವಿಶಾಖಪಟ್ಟಣಂ, ಚೆನ್ನೈ, ತೂತ್ತುಕುಡಿ, ಕಾಂಡ್ಲಾ, ಒಖಾ, ಭಾವನಗರ ಅಪಾಯದಲ್ಲಿವೆ. ಈಗಿನ ಮಾಹಿತಿ ಪ್ರಕಾರ, ಈ ಪ್ರದೇಶಗಳಲ್ಲಿರುವ ಸಮುದ್ರ ಎರಡು ಅಡಿಯಷ್ಟು ಏರಲಿದೆ.
2006-18ರಲ್ಲಿ ನಡೆದ ಅಧ್ಯಯನದ ಪ್ರಕಾರ, ಸಮುದ್ರದ ಮಟ್ಟ ಪ್ರತಿ ವರ್ಷ 3.7 ಮಿ.ಮೀ ನಷ್ಟು ಏರಿಕೆಯಾಗುತ್ತದೆ. 1988ರಿಂದ ಈಚೆಗೆ ಜಾಗತಿಕ ತಾಪಮಾನ ಗಣನೀಯವಾಗಿ ಹೆಚ್ಚಾದ್ದರಿಂದ ಹಿಮಾಚ್ಛಾದಿತ ಪ್ರದೇಶಗಳಲ್ಲಿ ಹಿಮ ಕರಗಿ ಸಮುದ್ರ ಸೇರುತ್ತಿದೆ. ಈ ಹಿಂದೆ ಪ್ರತಿ 100 ವರ್ಷಗಳಿಗೊಮ್ಮೆ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಈಗ ಹತ್ತಾರು ವರ್ಷಗಳಿಗೊಮ್ಮೆ ಏರಿಕೆಯಾಗುತ್ತಿದೆ.
ತಗ್ಗುಪ್ರದೇಶಗಳಿಗೆ ಸಾಗರದ ನೀರು ನುಗ್ಗುವುದು, ಪ್ರತಿ 100 ವರ್ಷಕ್ಕೊಮ್ಮೆ ಆಗುತ್ತಿದ್ದ ಕರಾವಳಿ ಭೂ ಸವಕಳಿ ಈಗ ಪ್ರತಿ ವರ್ಷ ಸಂಭವಿಸುತ್ತಿದೆ. 2050ರ ಒಳಗಾಗಿ ಪ್ರತಿ 6 ರಿಂದ 9 ವಷಕ್ಕೊಮ್ಮೆ ಸಂಭವಿಸಬಹುದು ಎಂದು ನಾಸಾ ಹೇಳಿದೆ.
ಬಟ್ಟೆ ಬದಲಿಸುವ ವಿಡಿಯೋ ಬಳಸಿ ಬ್ಲ್ಯಾಕ್’ಮೇಲ್: ವಿವಾಹಿತೆ ಮೇಲೆ ವೃದ್ಧರಿಂದ ಸಾಮೂಹಿಕ ಅತ್ಯಾಚಾರ
ಬಟ್ಟೆ ಬದಲಿಸುವ ವಿಡಿಯೋ ಬಳಸಿ ಬ್ಲ್ಯಾಕ್’ಮೇಲ್: ವಿವಾಹಿತೆ ಮೇಲೆ ವೃದ್ಧರಿಂದ ಸಾಮೂಹಿಕ ಅತ್ಯಾಚಾರ