ನವದೆಹಲಿ: 71ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶದ ಬಹುತ್ವ, ಉಡುಗೆಯ ವೈವಿಧ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಸುಂದರ ಜೀವವೈವಿಧ್ಯವನ್ನು ಗೂಗಲ್ ಡೂಡಲ್‌ನಲ್ಲಿ ಹಿಡಿದಿಟ್ಟಿದೆ.
ವರ್ಣರಂಜಿತ ಡೂಡಲ್‌ನಲ್ಲಿ ಸಂಗೀತ ವಾದ್ಯಗಳು, ಸಾಂಸ್ಕೃತಿಕ ಕಲೆಗಳು, ಸ್ಮಾರಕಗಳು, ಆಧುನಿಕತೆಯ ಸಂಕೇತಗಳಾದ ಮೆಟ್ರೋ ರೈಲುಗಳ ಚಿತ್ರಗಳು ಕಂಡುಬಂದವು. ಗೂಗಲ್‌ನ ‘ಒ’ವನ್ನು ರಾಷ್ಟ್ರಪಕ್ಷಿ ನವಿಲಿನ ಆಕೃತಿಯಲ್ಲಿ, ಮತ್ತೂಂದು ‘ಒ’ ಅನ್ನು ಕಥಕ್ಕಳಿ ನೃತ್ಯಗಾರನ ಮಾದರಿ, ‘ಎಲ್’ ಅವನ್ನು ಸಿತಾರ್ ಆಕೃತಿಯಲ್ಲಿ ಚಿತ್ರಿಸಲಾಗಿತ್ತು.
ಗಣರಾಜ್ಯೋತ್ಸವಕ್ಕೆ ಗೂಗಲ್ ಡೂಡಲ್ ಗೌರವ
Follow Us