ಬೆಂಗಳೂರು: ರಾಜ್ಯದಲ್ಲಿ ಪಾಳು ಬಿದ್ದ ಕೃಷಿಭೂಮಿ ಗುತ್ತಿಗೆ ಸಕ್ರಮ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ರೈತರು ಕೃಷಿ ಭೂಮಿಯನ್ನು ಪಾಳು ಬಿಟ್ಟಿರುವುದರಿಂದ ಕೃಷಿ ಕುಂಠಿತವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪಾಳು ಬಿಟ್ಟ ಕೃಷಿ ಭೂಮಿ ಗುತ್ತಿಗೆ ಸಕ್ರಮಕ್ಕೆ ಮುಂದಾಗಿದೆ. ಗುತ್ತಿಗೆ ಪಡೆಯುವ ನಿರ್ಧಾರವನ್ನು ಭೂ ಮಾಲೀಕರಿಗೆ ಬಿಟ್ಟುಕೊಡಲು ನಿರ್ಧರಿಸಿದೆ.
ಈ ಮಾಹಿತಿ ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ಬೇಸಾಯ ಮಾಡುತ್ತಿದ್ದವರು ನಗರ ಪ್ರದೇಶ ಸೇರಿದ್ದಾರೆ.ಹೀಗಾಗಿ ಕೃಷಿ ಭೂಮಿ ಪಾಳು ಬಿದ್ದಿವೆ. ಇದರಿಂದ ಕೃಷಿ ಆದಾಯ ಮತ್ತು ಆಹಾರ ಉತ್ಪಾದನೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಭೂಮಿಯನ್ನು ಗುತ್ತಿಗೆ ನೀಡುವ ಪದ್ಧತಿಯನ್ನು ಸಕ್ರಮಗೊಳಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದರು.
ಪಾಳು ಕೃಷಿ ಭೂಮಿ ಗುತ್ತಿಗೆ ಸಕ್ರಮಕ್ಕೆ ಸರ್ಕಾರ ಚಿಂತನೆ
Follow Us