newsics.com
ನವದೆಹಲಿ: ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪ್ರಕಟಿಸಿದೆ.
ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಂಕ್ ಅವರು ಟ್ವೀಟ್ ಮಾಡಿದ್ದು, ಪ್ರಸ್ತಾವಿತ ಪದವಿ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ಈ ವೇಳಾಪಟ್ಟಿಯ ಪ್ರಕಾರ, ನವೆಂಬರ್ 1 ರಿಂದ ಪದವಿ ಕಾಲೇಜುಗಳು ಆರಂಭವಾಗಲಿವೆ. 2021 ರ ಆಗಸ್ಟ್ 30ಕ್ಕೆ ಪದವಿ ಶೈಕ್ಷಣಿಕ ವರ್ಷ ಮುಕ್ತಾಯವಾಗಲಿದೆ.
ಮೊದಲ ಸೆಮಿಸ್ಟರ್ ಪರೀಕ್ಷೆಗಳು ಮಾರ್ಚ್ 8 ರಿಂದ 23ರ ನಡುವೆ ನಡೆಯಲಿದೆ. ಎರಡನೇ ಸೆಮಿಸ್ಟರ್ ಏಪ್ರಿಲ್ 5ರಿಂದ ಆರಂಭವಾಗಲಿದ್ದು, ಪರೀಕ್ಷೆಗಳು ಆಗಸ್ಟ್ ನಲ್ಲಿ ನಡೆಯಲಿವೆ.
ಪ್ರಥಮ ವರ್ಷದ ಕಾಲೇಜು ಮತ್ತು ವಿವಿ ವಿದ್ಯಾರ್ಥಿಗಳಿಗಾಗಿ ತನ್ನ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಯುಜಿಸಿ ಮತ್ತೆ ಪರಿಷ್ಕರಿಸಿದ್ದು, ಈ ಪರಿಷ್ಕೃತ ಕ್ಯಾಲೆಂಡರ್ ನಂತೆ ಪ್ರಥಮ ವರ್ಷದ ತರಗತಿಗಳು ಸೆಪ್ಟೆಂಬರ್ ಬದಲು ನವೆಂಬರ್ ನವೆಂಬರ್ 1 ರಿಂದ ಆರಂಭಗೊಳ್ಳಲಿವೆ. ಒಂದು ವೇಳೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನವೆಂಬರ್ ತನಕ ಕಾಲೇಜು ಮರುಆರಂಭದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೇ ಇದ್ದಲ್ಲಿ ನವೆಂಬರ್ ನಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ಆರಂಭಗೊಳ್ಳಲಿವೆ.
ಒಮ್ಮೆ ಸಾಮಾನ್ಯ ತರಗತಿಗಳು ಆರಂಭಗೊಂಡ ನಂತರ ವಾರದಲ್ಲಿ ಆರು ದಿನಗಳ ಕಾಲ ತರಗತಿಗಳನ್ನು ನಡೆಸಬೇಕು ಹಾಗೂ ಬೇಸಿಗೆ ಹಾಗೂ ಚಳಿಗಾಲದ ರಜೆಗಳು ಇರುವುದಿಲ್ಲ ಎಂದು ಯುಜಿಸಿ ಹೇಳಿದೆ.
ಅಕ್ಟೋಬರ್ 31 ರೊಳಗೆ ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಬೇಕೆಂದು ಯುಜಿಸಿ ಹೇಳಿದೆ. ಕೊರೋನಾ ಸಂಕಷ್ಟ ಹಿನ್ನೆಲೆಯಲ್ಲಿ ಪದವಿ ತರಗತಿಯ ಪ್ರವೇಶ ರದ್ದು ಮಾಡಲು ಅಥವಾ ಬೇರೆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಪೋಷಕರು ಬಯಸಿದರೆ ಪಾವತಿಸಿರುವ ಪೂರ್ಣ ಶುಲ್ಕವನ್ನು ಹಿಂತಿರುಗಿಸಬೇಕು ಎಂದಿರುವ ಯುಜಿಸಿ, ನವೆಂಬರ್ 30 ರೊಳಗೆ ಈ ಪ್ರಕ್ರಿಯೆ ಮುಗಿದಿರಬೇಕು ಎಂದು ಹೇಳಿದೆ. ಕಲಿಕೆಯ ಸಮಯವನ್ನು ಸರಿದೂಗಿಸಲು ವಾರದಲ್ಲಿ ಆರು ದಿನ ಕಲಿಸಲು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ. ವಿರಾಮಗಳು ಮತ್ತು ರಜಾದಿನಗಳನ್ನು ಸಹ ಮೊಟಕುಗೊಳಿಸಲಾಗುತ್ತದೆ.
ಇನ್ಮುಂದೆ ವಿದ್ಯುತ್‌ಗೂ ಸಿಗಲಿದೆ ಎಲ್‌ಪಿಜಿ ಮಾದರಿ ಸಬ್ಸಿಡಿ..!
ಲಡಾಖ್ ಗಸ್ತಿಗೆ 2 ಡುಬ್ಬಗಳ ಒಂಟೆ ಬಳಕೆಗೆ ಸೇನೆ ನಿರ್ಧಾರ
ವಿದೇಶಿ ದೇಣಿಗೆ ಪಡೆವ ಎನ್’ಜಿಒಗಳಿಗೆ ಆಧಾರ್ ಕಡ್ಡಾಯ
ಮಾದಕ ದ್ರವ್ಯದ ಕಂಪನ: ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಎನ್ ಸಿ ಬಿ ನೋಟಿಸ್