ಮಂಗಳೂರು: ಕಾಮಕ್ಕೆ ಕಣ್ಣಿಲ್ಲ, ಪ್ರೇಮ ಕುರುಡು ಎನ್ನುವ ಮಾತಿದೆ. ಈ ಕಾಮ, ಪ್ರೇಮಕ್ಕೆ ವಯಸ್ಸಿನ ಹಂಗೂ ಇಲ್ಲ. ಕಾಲದ ಭಯವೂ ಇಲ್ಲ.
ಕೊರೋನಾ ಕಾಲದಲ್ಲೂ ಅಜ್ಜ ಆಂಟಿಗೆ ಕೊಟ್ಟ ಮುತ್ತೇ ಈಗ ಬಿಂದಾಸ್ ಮಾತುಗಳಿಗೆ ಕಾರಣವಾಗಿದೆ. ಈ ಮಾತಿಗೆಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈ ಅಜ್ಜ ಸಾಕ್ಷಿಯಾಗಿದ್ದಾರೆ. ಸಾಲದ್ದಕ್ಕೆ ಪುತ್ತೂರಿಗರಿಗೆ ತಮಾಷೆಯ ವ್ಯಕ್ತಿಯೂ ಆಗಿಬಿಟ್ಟಿದ್ದಾರೆ. ಅಷ್ಟಕ್ಕೂ ಈ ತಾತ ಪ್ರಸಿದ್ಧಿ ಪಡೆಯಲು ಬಲವಾದ ಕಾರಣವೂ ಇದೆ.ಪುತ್ತೂರಿನ ಈ ತಾತ ಹೇಳಿಕೇಳಿ ಮೊದಲೇ ಪೋಲಿ. ಕಂಡ ಕಂಡ ಹೆಣ್ಣುಮಕ್ಕಳ ಮೇಲೆಲ್ಲಾ ಕಣ್ಣು ಹಾಕಿ, ಹಲವರಿಂದ ಉಗಿಸಿಕೊಂಡು ಫೇಮಸ್ ಆಗಿದ್ದ ತಾತ ಈಗ ಇನ್ನಷ್ಟು ಫೇಮಸ್ ಆಗಿಬಿಟ್ಟಿದ್ದಾರೆ.
ಕೊರೋನಾ ಕಾಲದಲ್ಲಿ ಕಾಮದ ಮತ್ತಲ್ಲಿ ಆಂಟಿಗೆ ಮುತ್ತು ಕೊಟ್ಟು ಕೊರೋನಾ ಕುತ್ತು ತಂದುಕೊಂಡಿರುವುದು ಈಗ ಹಲವರ ಹುಬ್ಬೇರಿಸಿದೆ. ಮುತ್ತಿನ ಕರಾಮತ್ತೇ ಈಗ ಮನೆ ಮನೆ ಮಾತಾಗಿದೆ.
ಕೊರೋನಾದಿಂದಾಗಿ ಎಲ್ಲೆಡೆ ಲಾಕ್ ಡೌನ್. ಕೊರೋನಾ ಕಾರಣದಿಂದ ಪುರುಸೊತ್ತಾಗಿಯೇ ಇದ್ದ ಆಂಟಿಯೂ ಈ ರಸಿಕ ಅಜ್ಜನಿಗೆ ಸಿಕ್ಕಿಬಿಟ್ಟಳು. ಅಂದಮೇಲೆ ಕೇಳಬೇಕೆ, ಎಲ್ಲರೂ ಕೊರೋನಾದಿಂದ ಲಾಕ್ ಆಗಿರುವಾಗಲೇ ಈ ಅಜ್ಜ ಆಂಟಿಯ ಲಿಪ್ ಲಾಕ್ ಮಾಡಿಬಿಟ್ಟಿದ್ದ!
ಈ ಆಂಟಿಗೆ ಕೊರೋನಾ ಸೋಂಕು ಅಂಟಿದ್ದು ತಿಳಿಯದ ಅಜ್ಜ ಆಂಟಿ ಜತೆ ಲಿಪ್ ಲಾಕ್ ಮಾಡಿ ಕೊರೋನಾ ಅಂಟಿಸಿಕೊಂಡ. ಕಾಮ-ಪ್ರೇಮದ ಮತ್ತಲ್ಲಿ ಆಂಟಿಗೆ ಮುತ್ತು ಕೊಟ್ಟ ತಾತ ಈಗ ಕೋವಿಡ್ ಆಸ್ಪತ್ರೆಯಲ್ಲಿದ್ದಾರೆ. ಸಾಲದ್ದಕ್ಕೆ, ಜನರ ನಾಲಿಗೆಯಲ್ಲಿ ನಲಿದಾಡುತ್ತಿದ್ದಾರೆ.
ಇಷ್ಟೆಲ್ಲಾ ಆದರೂ ಪೋಲಿ ತಾತ ಮಾತ್ರ ಕೋವಿಡ್ ಆಸ್ಪತ್ರೆಯಲ್ಲೇ ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿಯವರ
‘ಯಾರು ಕದ್ದು ನುಡಿದರೇನು, ಊರೇ ಎದ್ದು ಕುಣಿದರೇನು,
ಜನರ ಬಾಯಿಗಿಲ್ಲ ಬೀಗ, ಹೃದಯದೊಳಗೆ ಪ್ರೇಮರಾಗ…‘
ಹಾಡುತ್ತಿದ್ದಾರಂತೆ.
ಆಂಟಿಗೆ ಮುತ್ತು ಕೊಟ್ಟ ತಾತನಿಗೆ ಕೊರೋನಾ ಕುತ್ತು!
Follow Us