ನವದೆಹಲಿ: ಕೊರೋನಾದಿಂದ ಕಂಗೆಟ್ಟು ಆದಾಯ ಕೊರತೆ ಎದುರಿಸುತ್ತಿರುವ ತನ್ನ ಸಾಲಗಾರರಿಗೆ ಎಸ್‍ಬಿಐ ಭರ್ಜರಿ ರಿಲೀಫ್ ನೀಡಿದ್ದು, ಸಾಲದ ಕಂತು ಪಾವತಿಯನ್ನು ಗರಿಷ್ಠ ಎರಡು ವರ್ಷಗಳ ಅವಧಿಗೆ ಮುಂದೂಡಲಾಗಿದೆ ಎಂದು ಘೋಷಿಸಿದೆ.
ಎಸ್ಬಿಐನಲ್ಲಿ ಗೃಹ ಮತ್ತು ಚಿಲ್ಲರೆ ಸಾಲ ಪಡೆದ ಸಾಲಗಾರರಿಗೆ ಈ ಘೋಷಣೆ ಲಾಭ ತರಲಿದ್ದು, ಸಧ್ಯದಲ್ಲೇ ಬ್ಯಾಂಕ್ ಕಂತುಪಾವತಿಯ ಮರು ಹೊಂದಾಣಿಕೆ ಮತ್ತು ಮುಂದೂಡಿದ ಅವಧಿಯನ್ನು ಸೇರಿಸಿ ಸಾಲಮರುಪಾವತಿಯ ಅವಧಿಯನ್ನು ವಿಸ್ತರಿಸಲಿದೆ.
ವಿದೇಶಿ ದೇಣಿಗೆ ಪಡೆವ ಎನ್’ಜಿಒಗಳಿಗೆ ಆಧಾರ್ ಕಡ್ಡಾಯ
ಈ ಸೌಲಭ್ಯ 2020 ರ ಮಾರ್ಚ್ 1 ಕ್ಕಿಂತ ಮೊದಲು ಸಾಲ ಪಡೆದ ಗ್ರಾಹಕರಿಗೆ ಹಾಗೂ ಕೋವಿಡ್-19 ಲಾಕ್ ಡೌನ್‍ವರೆಗೆ ನಿಯಮಿತವಾಗಿ ಸಾಲ ಮರುಪಾವತಿ ಮಾಡಿದವರಿಗೆ ಈ ಸೌಲಭ್ಯ ದೊರಕಲಿದೆ.
ಆದರೆ ಈ ಸಾಲ ಮರುಪಾವತಿಯನ್ನು ಮುಂದೂಡಲು ಸಾಲಗಾರರು ಕೊವೀಡ್-19 ನಿಂದ ತಮ್ಮ ಆದಾಯಕ್ಕೆ ಧಕ್ಕೆ ಬಂದಿದೆ ಎಂಬುದನ್ನು ಸಾಬೀತುಪಡಿಸಬೇಕಿದೆ.
ಸಾಲದ ಮರುಹೊಂದಾಣಿಕೆಯು ಗ್ರಾಹಕರ ಆದಾಯ ಯಾವಾಗ ಸಹಜ ಸ್ಥಿತಿಗೆ ಮರಳಬಹುದು ಮತ್ತೆ ಯಾವಾಗ ಉದ್ಯೋಗಕ್ಕೆ ತೆರಳಬಹುದು ಎಂಬುದನ್ನು ಆಧರಿಸಿ ನಿರ್ಧಾರವಾಗುತ್ತದೆ ಎಂದು ಎಸ್‍ಬಿಐನ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಶೆಟ್ಟಿ ಮಾಹಿತಿ ನೀಡಿದ್ದಾರೆ.
9 ಬ್ಯಾಂಕ್’ಗಳಿಗೆ 1,400 ಕೋಟಿ ವಂಚನೆ; ಕ್ವಾಲಿಟಿ ವಿರುದ್ಧ ಸಿಬಿಐ ಕೇಸ್
ನವೆಂಬರ್ 1ರಿಂದ ಪದವಿ ಕಾಲೇಜು ಆರಂಭ- ಯುಜಿಸಿ ಘೋಷಣೆ
ಬೆಂಗಳೂರು ಹಿಂಸಾಚಾರ: ಶಾಸಕರ ಮನೆಗೆ ಭೇಟಿ ನೀಡಿದ ಎನ್ಐಎ ತಂಡ
ಅಕ್ಟೋಬರ್’ವರೆಗೂ ನಟಿ ರಿಯಾ ಚಕ್ರವರ್ತಿಗೆ ಜೈಲು