Saturday, December 10, 2022

ಕಾಲೇಜು ಆರಂಭಕ್ಕೆ ಯುಜಿಸಿ ಮಾರ್ಗಸೂಚಿ 

Follow Us

newsics.com
ನವದೆಹಲಿ: ಕೊರೋನಾ ಭೀತಿಯ ನಡುವೆಯೂ ಆಯಾ ರಾಜ್ಯಗಳಲ್ಲಿ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಕಾಲೇಜು ತೆರೆಯುವ ಸಂಬಂಧ, ಅನುಸರಿಸಬೇಕಾದಂತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಈ ಮಾರ್ಗಸೂಚಿಯನ್ನು ಅನುಸರಿಸಿಯೆ ವಿವಿ ಕ್ಯಾಂಪಸ್, ಕಾಲೇಜುಗಳನ್ನು ತೆರೆಯುವಂತೆ ತಿಳಿಸಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಆಯಾ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿದ ನಂತರ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಅನುಕ್ರಮವಾಗಿ ತೆರೆಯಬಹುದು.
ಯಾವುದೇ ಕ್ಯಾಂಪಸ್ ತೆರೆಯುವ ಮೊದಲು, ಕೇಂದ್ರ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರವು ಶಿಕ್ಷಣ ಸಂಸ್ಥೆಗಳ ಪುನಾರಂಭಕ್ಕಾಗಿ ಈ ಪ್ರದೇಶವನ್ನು ಸುರಕ್ಷಿತವೆಂದು ಘೋಷಿಸಿರಬೇಕು. ಕೊರೋನಾ ದೃಷ್ಟಿಯಿಂದ ಸುರಕ್ಷತೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಹೊರಡಿಸಿರುವ ನಿರ್ದೇಶನಗಳು, ಸೂಚನೆಗಳು, ಮಾರ್ಗಸೂಚಿಗಳು ಮತ್ತು ಆದೇಶಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಸಂಪೂರ್ಣವಾಗಿ ಪಾಲಿಸಬೇಕು ಎಂದಿದೆ.
ಪಿಜಿ ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಸ್ಥೆಗೆ ಸೇರಲು ಯುಜಿಸಿ ಅವಕಾಶ ನೀಡುತ್ತದೆ. ಆದರೆ ಉಪನ್ಯಾಸರು, ವಿದ್ಯಾರ್ಥಿಗಳ‌ ಸೇರಿ ಎಲ್ಲರೂ ಸುರಕ್ಷತೆ ಮತ್ತು ಆರೋಗ್ಯ ಪರಿಸ್ಥಿತಿಗಳು, ಸೋಂಕಿತ ವ್ಯಕ್ತಿಗಳನ್ನು ತಪಾಸಣೆ ಮಾಡುವುದು ಮತ್ತು ಪತ್ತೆ ಮಾಡುವುದು, ಕ್ಯಾಂಪಸ್‌ನಲ್ಲಿ ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು ಎಂದಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಫೇಸ್ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈರ್ಸ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಇದರ ಜೊತೆಗೆ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರರು ಸೇರಿದಂತೆ ವಿವಿಧ ವರ್ಗದವರ ಆರೋಗ್ಯದ ಹಿತದೃಷ್ಠಿಯಿಂದ ಕೊರೋನಾ ಮುಂಜಾಗ್ರತ ಈ ಕೆಳಗಿನ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ. ಇದು ಕಡ್ಡಾಯಕೂಡ ಎಂದು ತಿಳಿಸಿದೆ.
ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು.
ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ನಿಯಂತ್ರಣ ವಲಯದಿಂದ ಹೊರಗಿದ್ದರೆ ಮಾತ್ರ ತೆರೆಯಲು ಅವಕಾಶ ನೀಡಬೇಕು. ಅಲ್ಲದೆ, ನಿಯಂತ್ರಣ ವಲಯದಲ್ಲಿ ವಾಸಿಸುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮತ್ತು ಕಾಲೇಜುಗಳಿಗೆ ಹಾಜರಾಗಲು ಅವಕಾಶ ನೀಡಬೇಕು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಈ ಬಗ್ಗೆ ಸೂಚನೆ ನೀಡಲಾಗುವುದು.
ಕಾಲೇಜಿನ ಬೋಧಕ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ‘ಆರೋಗ್ಯ ಸೇತು ಆಯಪ್’ ಡೌನ್ ಲೋಡ್ ಮಾಡಿಕೊಂಡು ಬಳಸಲು ಪ್ರೋತ್ಸಾಹಿಸಬೇಕು. ಕ್ಯಾಂಪಸ್ ನಲ್ಲಿ ಬೋಧಕರು ಮತ್ತು ಸಿಬ್ಬಂಧಿಗಳು ಸೋಂಕು ನಿವಾರಕ ಕ್ರಮಗಳನ್ನು ಅನುಸರಿಸಬೇಕು. ವಿದ್ಯಾರ್ಥಿಗಳ ಆರೋಗ್ಯವನ್ನು ಪರೀಕ್ಷಿಸಬೇಕು. ಸೋಂಕು ಪತ್ತೆ ಹಚ್ಚುವ ಕ್ರಮವಹಿಸಿ, ಕೊರೋನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ.
ಈ ಹಿಂದಿನ ಮಾರ್ಗಸೂಚಿಯಲ್ಲಿ ಆರು ದಿನಗಳ ವೇಳಾಪಟ್ಟಿ ಅನುಸರಿಸಿ ತರಗತಿಗಳನ್ನು ಹಂತ ಹಂತವಾಗಿ ನಡೆಸಬಹುದು ಮತ್ತು ದೈಹಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಆಸನಗಳ ವ್ಯವಸ್ಥೆಯನ್ನು ಮಾಡಬೇಕು. ಹೆಚ್ಚು ವಿದ್ಯಾರ್ಥಿಗಳಿರುವ ತರಗತಿಯನ್ನು ವಿಭಾಗಗಳಾಗಿ ವಿಂಗಡಿಸಬಹುದು ಎಂದು ಹೇಳಲಾಗಿತ್ತು.

ಮತ್ತಷ್ಟು ಸುದ್ದಿಗಳು

vertical

Latest News

ಡಿಸೆಂಬರ್ 15ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ

newsics.com ಬೆಂಗಳೂರು:  ಗುಜರಾತ್ ಚುನಾವಣೆ ಬಳಿಕ ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯದತ್ತ ದೃಷ್ಟಿ ನೆಟ್ಟಿದೆ. ಇದರ ಮೊದಲ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ...

ಕಾರ್ಕಳ ಬಳಿ ಭೀಕರ ಅಪಘಾತ: ದಂಪತಿ, ಮಗು ಸಹಿತ ಮೂವರ ಸಾವು

newsics.com ಮಂಗಳೂರು:  ಉಡುಪಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ  ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕಾರ್ಕಳದ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಮೈನೇರು ಎಂಬಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು...

ಇಂಡಿಗೋ ವಿಮಾನದಲ್ಲಿ ಹರಿದ ಸೀಟು: ಪೇಟಿಎಂ‌ ಸಿಇಒಗೆ ಅಚ್ಚರಿ!

newsics.com ಮುಂಬೈ: ನೀವು ಬಸ್‌ನಲ್ಲೋ, ಆಟೋದಲ್ಲೋ ಹರಿದ ಸೀಟುಗಳನ್ನು ನೋಡಿರಬಹುದು. ಆದರೆ ವಿಮಾನದಲ್ಲೂ ಹರಿದ ಸೀಟಿನ ಚಿತ್ರವನ್ನು ಪೇಟಿಎಂ ಸಿಇಒ Paytm CEO ಹಂಚಿಕೊಂಡಿದ್ದಾರೆ. 'ಈ ಏರ್‌ಲೈನ್‌ನಲ್ಲಿ ಮಾತ್ರ ಇಂತಹ ಹರಿದ ಸೀಟನ್ನು ಮೊದಲು ನೋಡಲಾಗಿದೆ'...
- Advertisement -
error: Content is protected !!