ಬೆಂಗಳೂರು: ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ಪೋರ್ಟ್ ಗೆ ಗನ್ ಸಮೇತ ಪ್ರವೇಶಿಸಿದ ಆರೋಪದ ಮೇರೆಗೆ ಜೆಡಿಎಸ್ ನಾಯಕ ಆನಂದ್ ಅಸ್ನೋಟಿಕರ್ ಅವರನ್ನು ಏರ್ಪೋರ್ಟ್ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಶನಿವಾರ ಅಸ್ನೋಟಿಕರ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಒಳಕ್ಕೆ ಪ್ರವೇಶಿಸುವ ವೇಳೆಗೆ ತಮ್ಮ ಬ್ಯಾಗ್‍ನಲ್ಲಿ ಗನ್ ಇರುವ ಬಗ್ಗೆ ಯಾವುದೇ ನೋಂದಣಿ ಮಾಡಿಸಿರಲಿಲ್ಲ. ಒಳ ಪ್ರವೇಶಿಸುವಾಗ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪರಿಶೀಲಿಸುವ ವೇಳೆ ಬ್ಯಾಗ್ ನಲ್ಲಿ ಗನ್ ಪತ್ತೆಯಾಗಿತ್ತು. ತಕ್ಷಣ ಪೊಲೀಸರನ್ನು ಕರೆಸಿಕೊಂಡ ವಿಮಾನ ನಿಲ್ದಾಣದ ಸಿಬ್ಬಂದಿ ಅಸ್ನೋಟಿಕರ್‍ನ್ನು ಪೊಲೀಸರಿಗೆ ಒಪ್ಪಿಸಿದರು.
ಈ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ ಅಸ್ನೋಟಿಕರ್ ತುರ್ತು ಕೆಲಸದ ಮೇಲೆ ಹೊರಟಿದ್ದೆ. ಬ್ಯಾಗ್‍ನಲ್ಲಿ ಗನ್ ಇರೋದು ಗೊತ್ತಿರಲಿಲ್ಲ. ಇದು ಪರವಾನಿಗೆ ಹೊಂದಿದ ಗನ್ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಹೇಳಿಕೆ ದಾಖಲಿಸಿಕೊಂಡ ಪೊಲೀಸರು ಅಸ್ನೋಟಿಕರ್‍ನ್ನು ಬಿಟ್ಟು ಕಳುಹಿಸಿದ್ದು, ಅಗತ್ಯ ಬಿದ್ದರೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬ್ಯಾಗ್‍ನಲ್ಲಿ ಗನ್ ಪತ್ತೆ ಜೆಡಿಎಸ್ ನಾಯಕ ಆನಂದ ಅಸ್ನೋಟಿಕರ್ ಪೊಲೀಸ್ ವಶಕ್ಕೆ
Follow Us