Tuesday, April 13, 2021

ವೆಹಿಕಲ್ ಫಾಗ್ ಸ್ಯಾನಿಟೈಸರ್’ಗೆ ಬೆಂಗಳೂರಲ್ಲಿ ಭಾರೀ ಬೇಡಿಕೆ

ಬೆಂಗಳೂರು: ಮನುಷ್ಯರಿಗೆ ಮಾತ್ರವಲ್ಲ, ನಮ್ಮ ವಾಹನಗಳಿಗೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂತಹ ವೆಹಿಕಲ್ ಫಾಗ್ ಸ್ಯಾನಿಟೈಸರ್ ಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆ. ಸ್ಯಾನಿಟೈಸರ್ ಬಳಕೆ ಮಾಡುವ ರಾಸಾಯನಿಕಗಳಿಂದ ವಾಹನಗಳಿಗೂ ಸ್ಯಾನಿಟೈಸರ್ ಮಾಡಲಾಗುತ್ತಿದೆ.
ಬೆಂಗಳೂರಿನ ಜಯನಗರದ ವೆಹಿಕಲ್ ಸರ್ವಿಸ್ ಸೆಂಟರ್ ಮಾಲೀಕ ಗಣೇಶ್ ರಾವ್ ಎನ್ನುವವರು ವಾಹನಗಳಿಗೆ ಸರ್ವಿಸ್ ಜತೆ ಸ್ಯಾನಿಟೈಸ್ ಮಾಡುತ್ತಿದ್ದಾರೆ. ಆಲ್ಕೋಹಾಲ್, ಗ್ಲಿಸರಿನ್, ಎಲೆಯ ಎಣ್ಣೆ, ನಿಂಬೆಹಣ್ಣು, ಟೀ ಟ್ರಿ ಆಯಿಲ್ ಮಿಶ್ರಿತ ರಾಸಾಯನಿಕ ಮಿಶ್ರಿತವಾದ ಸ್ಯಾನಿಟೈಸರ್ ಇದು. ಈ ರಾಸಾಯನಿಕವನ್ನು ಮೆಷಿನ್ ಮೂಲಕ ಬಿಸಿ ಮಾಡಿ ಸ್ಯಾನಿಟೈಸರ್ ಮಾಡಲಾಗುತ್ತಿದೆ. ವಾಹನದೊಳಗೆ 5ರಿಂದ 10 ನಿಮಿಷದವರೆಗೆ ಫಾಗ್ ಸ್ಯಾನಿಟೈಸರ್ ಮಾಡಲಾಗುತ್ತದೆ. ಕಾರು ಕ್ಲೀನ್ ಮಾಡುವುದರ ಜತೆಗೆ ಸ್ಯಾನಿಟೈಸ್ ಗೆ ಹೆಚ್ಚು ಬೇಡಿಕೆ ಬರುತ್ತಿದೆ. ಈ ಫಾಗ್ ಸ್ಯಾನಿಟೈಸರ್‌ ಸಿಂಪಡಣೆಯಿಂದ ಕೊರೋನಾ ವೈರಸ್ ಮಾತ್ರವಲ್ಲ ಬ್ಯಾಕ್ಟೀರಿಯಾ ನಾಶವಾಗುತ್ತದೆ ಎಂದು ಗಣೇಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!