ತಿರುವನಂತಪುರಂ: ಕೇರಳದ ಮುನ್ನಾರ್ ಸಮೀಪದ ರಾಜಾ ಮಲೆ ಎಂಬಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. ಕನಿಷ್ಟ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭೂ ಕುಸಿತ ಸಂಭವಿಸಿದಾಗ 83 ಮಂದಿ ಕೆಲಸದಲ್ಲಿ ನಿರತರಾಗಿದ್ದರು. ಇದಕ್ಕಿದ ಹಾಗೆ ಮಣ್ಣು ಅವರ ಮೇಲೆ ಜಾರಿ ಬಿತ್ತು ಎಂದು ವರದಿಯಾಗಿದೆ.
ಇದೀಗ 10 ಮಂದಿಯನ್ನು ರಕ್ಷಿಸಲಾಗಿದೆ. ರಾಜ್ಯ ಸರ್ಕಾರ ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆಯಲ್ಲಿ ನಿರತವಾಗಿದೆ.