Saturday, April 17, 2021

ಇಲ್ಲೊಂದು ‘ಗಂಟು’ ಆನೆ ಪ್ರತ್ಯಕ್ಷ!

ಚಾಮರಾಜನಗರ: ಮೈಮೇಲೆ ಗಂಟುಗಳುಳ್ಳ ಹೆಣ್ಣಾನೆಯೊಂದು ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಲಾಕ್ ಡೌನ್ ಹೇರಿದ್ದ ಹಿನ್ನೆಲೆ ಸುಮಾರು ಎಂಬತೈದು ದಿನಗಳ ಕಾಲ ಬಂಡೀಪುರಲ್ಲಿ ಸಫಾರಿಯನ್ನು ಬಂದ್ ಮಾಡಲಾಗುತ್ತು, ಜೂನ್ 8ರಿಂದ ಸಫಾರಿ ಪುನಾರಂಭವಾಗಿರುವ ಹಿನ್ನೆಲೆಯಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಗಂಟುಗಳುಳ್ಳ ಹೆಣ್ಣಾನೆಯೊಂದು ಹಿಂಡುಗಳ ನಡುವೆ ಕಂಡುಬಂದಿದೆ.
ಪ್ರವಾಸಿಗರು ಇದನ್ನು ನೋಡಿ ಅಚ್ಚರಿಗೊಂಡಿದ್ದಲ್ಲದೆ ಅದರ ಫೋಟೋ ಹಾಗೂ ವಿಡಿಯೋ ತೆಗೆದು ಅರಣ್ಯಾಧಿಕಾರಿಗಳಿಗೆ ಕಳುಹಿಸಿ ಇದೊಂದು ಅಂಟು ರೋಗವಾಗಿರುವ ಸಾಧ್ಯತೆಯಿರುವುದರಿಂದ ಕೂಡಲೇ ಚಿಕಿತ್ಸೆ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಡಾ.ಎಚ್.ಎಸ್ ಪ್ರಯಾಗ್ ಎಂಬುವರು ಮಾಹಿತಿ ನೀಡಿದ್ದು, ಕಾಡಾನೆಯ ಮೈಮೇಲೆ ಗಂಟುಗಳಾಗಿದ್ದು, ಮೇಲ್ನೋಟಕ್ಕೆ ಇದು ಗ್ಯಾಡ್ ಫ್ಲೈಸ್ ನಿಂದ ಬಳಲುತ್ತಿರುವಂತೆ ಕಂಡುಬರುತ್ತಿದೆ. ಮರಕ್ಕೆ ಮೈಉಜ್ಜಿಕೊಳ್ಳುವುದರಿಂದ ಇದು ಉಲ್ಬಣಗೊಳ್ಳಬಹುದು. ಹೀಗಾಗಿ ರೋಗಗ್ರಸ್ತ ಕಾಡಾನೆಯನ್ನು ಗುಂಪಿನಿಂದ ಬೇರ್ಪಡಿಸಿ ಸ್ಟ್ಯಾಂಡಿಂಗ್ ಅನೆಸ್ತೇಷಿಯಾ ನೀಡಿ ಒಂದು ಗಂಟನ್ನು ಒಡೆದು ಅದರಲ್ಲಿರುವ ಹುಳಗಳನ್ನು (ಲಾರ್ವಾ) ಪರೀಕ್ಷಿಸಬೇಕು. ಇದು ಗ್ಯಾಡ್ ಫ್ಲೈಸ್ ರೋಗ ಎಂಬುದು ಖಚಿತವಾದರೆ ನಂತರ ಆನೆಯನ್ನು ಕ್ಯಾಂಪಿಗೆ ಸ್ಥಳಾಂತರಿಸಿ ಅದರ ವಯಸ್ಸು, ಗಂಟುಗಳ ಪ್ರಮಾಣ ಹಾಗೂ ಹುಳಗಳ ಹರಡುವಿಕೆ ಆಧಾರದ ಮೇಲೆ ಹತ್ತರಿಂದ ಇಪ್ಪತ್ತು ದಿನಗಳ ಕಾಲ ಚಿಕಿತ್ಸೆ ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!