ಕಾರವಾರ: ಇಲ್ಲಿನ ವಾಣಿಜ್ಯ ಬಂದರು ಅಭಿವೃದ್ಧಿಯ ಎರಡನೇ ಹಂತದ ವಿಸ್ತರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಜತೆಗೆ ಕಡಲತೀರವನ್ನು ಹಿಂದಿದ್ದಂತೆ ಮರುಸ್ಥಾಪಿಸಲು ಹೈಕೋರ್ಟ್ ಆದೇಶೀಸಿದೆ.
ಬೈತಖೋಲ್ ಬಂದರು ನಿರಾಶ್ರಿತ ಮೀನುಗಾರರ ಸಹಕಾರ ಸಂಘ ಈ ಕಾಮಗಾರಿ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಕಾಮಗಾರಿಗೆ ಮುನ್ನ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರದ ಅನುಮತಿ ಪಡೆದಿಲ್ಲದಿರುವುದರ ಕುರಿತು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದರೂ ಕಾಮಗಾರಿ ಮುಂದುವರಿಸಿದ್ದಕ್ಕೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಬಂದರು ಕಾಮಗಾರಿ ಮೀನುಗಾರರ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.
ಕಾರವಾರ ಬಂದರು ಕಾಮಗಾರಿಗೆ ಹೈಕೋರ್ಟ್ ತಡೆ
Follow Us