♦ ನಾಳೆಯೊಳಗೆ ಸ್ಪಷ್ಟನೆ ನೀಡಲು ಸರ್ಕಾರಕ್ಕೆ ಸೂಚನೆ
newsics.com
ಬೆಂಗಳೂರು: ರಾಜ್ಯ ಸರ್ಕಾರ ಹೊರಡಿಸಿದ ಆದೇಶವೇ ಅರ್ಥಹೀನ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಹಸಿರು ಪಟಾಕಿ ಎಂದರೆ ಏನೆಂಬುದನ್ನು ಸರ್ಕಾರ ತಿಳಿಸಿಲ್ಲ. ಹಸಿರು ಪಟಾಕಿ ಯಾವುದೆಂಬುದನ್ನು ಜನರೇ ನಿರ್ಧರಿಸಬೇಕೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ನಾಳೆಯೊಳಗೆ (ನ.13) ಸ್ಪಷ್ಟನೆ ನೀಡಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ನ.6 ಮತ್ತು 10ರ ಸರ್ಕಾರದ ಆದೇಶದಲ್ಲಿ ಹಸಿರು ಪಟಾಕಿ ಬಗ್ಗೆ ಸರ್ಕಾರ ಸ್ಪಷ್ಟಪಡಿಸದೆ ಆದೇಶ ನೀಡಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಎಲ್ಲಾ ಬಗೆಯ ಪಟಾಕಿಗಳನ್ನು ನಿರ್ಬಂಧಿಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪಟಾಕಿಗಳಿಂದ ಹೆಚ್ಚಿನ ವಾಯುಮಾಲಿನ್ಯ ಉಂಟಾಗುತ್ತದೆ. ವಾಯುಮಾಲಿನ್ಯ ಕೊರೋನಾ ಹರಡಲು ಕಾರಣವಾಗಬಹುದು. ಮೊದಲೇ ಅರ್ಜಿ ಸಲ್ಲಿಸಿದರೆ ಕಠಿಣ ಆದೇಶ ಹೊರಡಿಸುತ್ತಿದ್ದೆವು. ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ಪಟಾಕಿ ಸಿಡಿಸಲು ನಿರ್ಬಂಧ ಹೇರುವುದಾಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಎಚ್ಚರಿಕೆ ನೀಡಿದೆ.
ದೀಪಾವಳಿ ವೇಳೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿ ನಾಳೆಯೊಳಗೆ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ತಾಕೀತು ಮಾಡಿದ್ದು, ನಾಳೆ ಬೆಳಗ್ಗೆ 10.30 ಕ್ಕೆ ವಿಚಾರಣೆ ಮುಂದೂಡಿದೆ.
ತೆಲಂಗಾಣದಲ್ಲೂ ಪಟಾಕಿ ನಿಷೇಧ: ನಿಯಮ ಮೀರಿದರೆ ದಂಡ
ಬಾಲಿವುಡ್ ನಟ ಆಸ್ರಿಫ್ ಬಸ್ರಾ ಇನ್ನಿಲ್ಲ
ಭೀಕರ ಚಂಡಮಾರುತಕ್ಕೆ ಫಿಲಿಪೈನ್ಸ್ ತತ್ತರ