Wednesday, January 27, 2021

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ; 570 ಜನರ ವಿರುದ್ಧ ಎಫ್‌ಐಆರ್‌‌

ಬೆಂಗಳೂರು: ನಗರದಲ್ಲಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ 570 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
ಬಿಬಿಎಂಪಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, ನಗರ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಹೊರಗೆ ಸುತ್ತಾಡಿದ ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. 30 ಎನ್‌ಸಿಆರ್‌ಗಳನ್ನು ಸಹ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಧ್ರುವ ಸರ್ಜಾ ದಂಪತಿಗೆ ಕೊರೋನಾ


ಬಿಬಿಎಂಪಿ ವಾರ್‌ ರೂಂ ಮಂಗಳವಾರ (ಜುಲೈ 14) ನೀಡಿದ ಮಾಹಿತಿಯಂತೆ, ಬೆಂಗಳೂರು ನಗರದಲ್ಲಿ 87,557 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಇವರಲ್ಲಿ ಸೋಂಕು ಪೀಡಿತರು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ ವ್ಯಕ್ತಿಗಳಿದ್ದಾರೆ.
12 ಸಾವಿರ ಸ್ವಯಂಸೇವಕರು:
ಹೋಂ ಕ್ವಾರಂಟೈನ್ ಮಾರ್ಗಸೂಚಿ ಪಾಲನೆ ಬಗ್ಗೆ ಗಮನಿಸಲು 12 ಸಾವಿರ ಸ್ವಯಂ ಸೇವಕರು ತಮ್ಮ ಹೆಸರನ್ನು ನೋಂದಣಿ ಮಾಡಿದ್ದಾರೆ. 10 ಸಾವಿರ ಸಿಬ್ಬಂದಿಯನ್ನು ವಾರ್ಡ್ ಮತ್ತು ಬೂತ್ ಮಟ್ಟದಲ್ಲಿ ನೇಮಕ ಮಾಡಲಾಗಿದೆ.

ಎಂಟಿಆರ್’ನ 30 ಸಿಬ್ಬಂದಿಗೆ ಸೋಂಕು, 40 ಮಂದಿ ಕ್ವಾರಂಟೈನ್‌


ಮೂರು ದಿನಕ್ಕೊಮ್ಮೆ ಅಧಿಕಾರಿಗಳು ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಹಲವು ಬಾರಿ ಮಾರ್ಗಸೂಚಿಗಳನ್ನು ಪಾಲನೆ ಮಾಡದವರಿಗೆ ಎಚ್ಚರಿಕೆ ನೀಡಲಾಗಿದೆ. ಪದೇ ಪದೇ ನಿಯಮ ಉಲ್ಲಂಘಟನೆ ಮಾಡಿದಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕೊರೋನಾ ಸೋಂಕಿತರಾಗಿದ್ದ ಶೇಕಡ 96.91 ಮಂದಿ ಗುಣಮುಖ

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಇಳಿಮುಖವಾಗುತ್ತಿದೆ.ಕಳೆದ  24 ಗಂಟೆಯಲ್ಲಿ   12, 689  ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.89, 527...

ಕೊರೋನಾ ಸೃಷ್ಟಿಸಿದ್ದು ಶಿವನಂತೆ: ಇಬ್ಬರು ಮಕ್ಕಳನ್ನು ಕೊಂದ ತಾಯಿಯ ಹುಚ್ಚು ಹೇಳಿಕೆ

Newsics.com ತಿರುಪತಿ: ಮೂಢನಂಬಿಕೆಗೆ ಜೋತುಬಿದ್ದು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದ ತಾಯಿ ಪದ್ಮಜ ಇದೀಗ ಹುಚ್ಚು ಹೇಳಿಕೆ ನೀಡುತ್ತಿದ್ದಾರೆ. ಈಗಲೂ ಕೂಡ ಸಾಮಾನ್ಯ ಸ್ಥಿತಿಗೆ ಮರಳದಿರುವ ಪದ್ಮಜ, ಹುಚ್ಚರಂತೆ ವರ್ತಿಸುತ್ತಿದ್ದಾರೆ. ಕೊರೋನಾ ಚೀನಾದಲ್ಲಿ ಸೃಷ್ಟಿಯಾಗಿಲ್ಲ....

ದೆಹಲಿ ಹಿಂಸಾಚಾರದಲ್ಲಿ 300 ಪೊಲೀಸರಿಗೆ ಗಾಯ

Newsics.com ನವದೆಹಲಿ: ಮಂಗಳವಾರ ದೆಹಲಿಯಲ್ಲಿ ರೈತರ ದಾಳಿಯಿಂದ 300 ಪೊಲೀಸರು ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಇಲಾಖೆ ಹೇಳಿದೆ. ರೈತರು ಆಕ್ರೋಶದಿಂದ ಪೊಲೀಸರನ್ನು ಗುರಿಯಾಗಿರಿಸಿ ದಾಳಿ ನಡೆಸಿದ್ದಾರೆ. ಚೂಪಾದ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ  ಎಂದು...
- Advertisement -
error: Content is protected !!