ನವದೆಹಲಿ: ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಮಹಿಳೆಯರನ್ನು ಮುಂದಿಟ್ಟುಕೊಂಡು ನಾವಿಕರನ್ನು ಬಲೆಗೆ ಬೀಳಿಸಿಕೊಳ್ಳುವ ಜಾಲವನ್ನು ಛೇದಿಸಿದ ಬಳಿಕ ಭಾರತೀಯ ನೌಕಾಪಡೆ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಿದೆ. ಯುದ್ಧ ನೌಕೆ, ನೌಕಾಪಡೆ ಆವರಣದಲ್ಲಿ ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ.
ಫೇಸ್ಬುಕ್, ಟ್ವಿಟ್ಟರ್, ಟಿಕ್ ಟಾಕ್, ಲಿಂಕ್ಡಿನ್, ಯೂಟ್ಯೂಬ್, ಟೆಲಿ ಗ್ರಾಮ್, ಸಿಗ್ನಲ್, ವಿಚಾಟ್, ಟಂಬ್ಲರ್, ರೆಡಿಟ್, ಟ್ರೂ ಕಾಲರ್, ವೈಬರ್, ಪಬ್ಜಿ ಸೇರಿದಂತೆ 85ಕ್ಕೂ ಅಧಿಕ ಅಪ್ಲಿಕೇಷನ್ ಬಳಕೆಯನ್ನು ನಿರ್ಬಂಧಿಸಿದೆ. ಮೇಸೇಜಿಂಗ್, ಚಾಟಿಂಗ್, ವಿಡಿಯೋ ಶೇರಿಂಗ್, ಇ ಕಾಮರ್ಸ್ ತಾಣಗಳ ಬಳಕೆ ನಿಷೇಧವಾಗಿದೆ. ಆದರೆ, ವಾಟ್ಸಾಪ್, ಟ್ವಿಟ್ಟರ್, ಟೆಲಿಗ್ರಾಮ್, ಯೂಟ್ಯೂಬ್, ಸ್ಕೈಪ್, ಕೋರಾ, ಲಿಂಕ್ಡಿನ್ ನಿರ್ಬಂಧಿತ ಬಳಕೆಗೆ ಲಭ್ಯವಿರಲಿದೆ.
ಆಂಧ್ರಪ್ರದೇಶ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ಸಂಸ್ಥೆ(ಐಬಿ) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 10 ಮಂದಿ ನಾವಿಕರನ್ನು ಬಂಧಿಸಲಾಗಿದ್ದು, ವಿಚಾರಣೆ ಜಾರಿಯಲ್ಲಿದೆ.
ಹನಿ ಟ್ರ್ಯಾಪ್; ಸೋಶಿಯಲ್ ಮೀಡಿಯಾ ನಿಷೇಧಿಸಿದ ನೌಕಾಪಡೆ
Follow Us