ಹೈದರಾಬಾದ್: 13 ವರ್ಷಗಳ ಹಿಂದೆ ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಅಸ್ತಿತ್ವಕ್ಕೆ ತಂದಿದ್ದ ವಿಧಾನಪರಿಷತ್ ಅನ್ನು ಸಿಎಂ ಜಗನ್ ಮೋಹನ್ ರೆಡ್ಡಿ ರದ್ದುಗೊಳಿಸಿದ್ದಾರೆ.
ಸಿಎಂ ರೆಡ್ಡಿ ಅವರ ನಿರ್ಧಾರಕ್ಕೆ ಆಂಧ್ರಪ್ರದೇಶ ಸಚಿವ ಸಂಪುಟ ಸಭೆ ಸೋಮವಾರ ಬೆಳಗ್ಗೆ ಅನುಮೋದನೆ ನೀಡಿತ್ತು.
ಜಗನ್ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ವಿಧಾನಪರಿಷತ್ ನಲ್ಲಿ ತಡೆ ಒಡ್ಡಲಾಗುತ್ತಿದೆ. ಹೀಗಾಗಿ ಪರಿಷತ್ತನ್ನೇ ಜಗನ್ ರದ್ದುಗೊಳಿಸಿದ್ದಾರೆ.
1985ರ ಮೇ 31ರಂದು ತೆಲುಗು ದೇಶಂ ಸಂಸ್ಥಾಪಕ ಎನ್.ಟಿ.ರಾಮರಾವ್ ಮುಖ್ಯಮಂತ್ರಿಯಾಗಿದ್ದಾಗ ಆಂಧ್ರ ವಿಧಾನ ಪರಿಷತ್ ನ್ನು ರದ್ದುಗೊಳಿಸಿದ್ದರು. ಈ ಸದನದಿಂದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಹೇಳಿದ್ದರು. 22 ವರ್ಷಗಳ ಬಳಿಕ ಅಂದರೆ 2017ರಲ್ಲಿ ರಾಜಶೇಖರ ರೆಡ್ಡಿಯವರು ವಿಧಾನಪರಿಷತ್ ನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದರು. ಇದೀಗ ಅವರ ಪುತ್ರ ಜಗನ್ ರದ್ದುಗೊಳಿಸಿದ್ದಾರೆ.
ಆಂಧ್ರ ವಿಧಾನಪರಿಷತ್ ರದ್ದತಿಗೆ ಜಗನ್ ಕ್ಯಾಬಿನೆಟ್ ಸಮ್ಮತಿ
Follow Us