newsics.com
ಸ್ಯಾನ್ ಪ್ರಾನ್ಸಿಸ್ಕೋ: ಮನುಷ್ಯನ ಆಲೋಚನೆಗಳನ್ನು ಗ್ರಹಿಸಿ, ಕಂಪ್ಯೂಟರ್ ಹಾಗೂ ಮೊಬೈಲ್ನೊಂದಿಗೆ ನೇರ ಸಂವಹನ ಮಾಡುವ ಚಿಪ್ ಒಂದನ್ನು ಮಾನವನ ಮೆದುಳಿಗೆ ಅಳವಡಿಸುವ ಕಾರ್ಯ ಇನ್ನು ಆರು ತಿಂಗಳಲ್ಲಿ ಮುಗಿಯಲಿದೆ.
ಜಗತ್ತಿನ ನಂಬರ್ 1 ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಈ ಮಾಹಿತಿ ನೀಡಿದ್ದಾರೆ. ನಾನು ಕೂಡ ಈ ಚಿಪ್ ಅನ್ನು ಅಳವಡಿಸಿಕೊಳ್ಳುತ್ತೇನೆ ಎಂದು ಮಸ್ಕ್ ಹೇಳಿದ್ದಾರೆ.
ಇಲಾನ್ ಮಸ್ಕ್ ಒಡೆತನದ ‘ನ್ಯೂರಾಲಿಂಕ್‘ ಎನ್ನುವ ಕಂಪನಿ ಈ ಸಾಧನ ತಯಾರಿಸುತ್ತಿದೆ. ಈ ಸಾಧನದ ಬಳಕೆಗೆ ಅನುಮತಿ ಕೋರಿ ಎಲ್ಲಾ ದಾಖಲೆಗಳನ್ನು ಎಫ್ಡಿಎಗೆ (ಅಮೆರಿಕದ ಆಹಾರ ಹಾಗೂ ಔಷಧ ಪ್ರಾಧಿಕಾರ) ಸಲ್ಲಿಸಲಾಗಿದೆ. ಬಹುಶಃ ಇನ್ನು ಆರು ತಿಂಗಳಲ್ಲಿ ಮನುಷ್ಯರ ತಲೆಯಲ್ಲಿ ಮೊದಲ ಚಿಪ್ ಅಳವಡಿಕೆಯಾಗಲಿದೆ ಎಂದು ಇಲಾನ್ ಮಸ್ಕ್ ಹೇಳಿದ್ದಾರೆ.
ಕೋತಿಗಳ ಮೇಲೆ ಈಗಾಗಲೇ ಈ ಪ್ರಯೋಗ ನಡೆದಿದ್ದು, ಅವುಗಳ ತಲೆಯಲ್ಲಿ ನಾಣ್ಯ ಗಾತ್ರದ ಮತ್ತು ನ್ಯೂರಾಲಿಂಕ್ ಸಾಧನ ಅಳವಡಿಸಲಾಗಿತ್ತು. ಇದರ ಪ್ರಭಾವದಿಂದ ಕೋತಿಗಳು ವಿಡಿಯೋ ಗೇಮ್ ಆಡುವುದು ಬೆಳಕಿಗೆ ಬಂದಿದೆ.
ಈಗ ಮನುಷ್ಯನ ಮೇಲೆ ಪ್ರಯೋಗಕ್ಕೆ ಮಸ್ಕ್ ಮುಂದಾಗಿದ್ದಾರೆ. ಆರಂಭಿಕ ಹಂತದಲ್ಲಿ ಸ್ನಾಯುಗಳು ನಿಷ್ಕ್ರಿಯವಾಗಿರುವವರ ಮೇಲೆ ಪ್ರಯೋಗ ಮಾಡಲಾಗುತ್ತದೆ ಎಂದು ಮಸ್ಕ್ ಮಾಹಿತಿ ನೀಡಿದ್ದಾರೆ.
ಅತೀ ಉದ್ದದ ಕಿವಿಯ ಕೂದಲು; ಗಿನ್ನಿಸ್ ದಾಖಲೆ ನಿರ್ಮಿಸಿದ ನಿವೃತ್ತ ಶಿಕ್ಷಕ
ಮೆಟ್ಟಿಲಿನಿಂದ ಜಾರಿ ಬಿದ್ದ ಗಾಯಕ ಜುಬಿನ್ ನೌಟಿಯಾಲ್ ; ಆಸ್ಪತ್ರೆಗೆ ದಾಖಲು