newsics.com
ಅಹಮದಾಬಾದ್: ‘ರಾಮ ಭಕ್ತರ ರಾಜ್ಯದಲ್ಲಿ ಒಬ್ಬರನ್ನು ರಾವಣ ಎಂದು ಕರೆಯುವುದು ಸರಿಯಲ್ಲ‘ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ಮೋದಿ ನೂರು ತಲೆ ರಾವಣ’ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ,
ನನಗೆ ಖರ್ಗೆ ಅವರ ಬಗ್ಗೆ ಗೌರವ ಇದೆ. ಆದರೆ ಅವರು ಏನು ಹೇಳಬೇಕಿತ್ತೋ, ಅದನ್ನು ಮಾತ್ರ ಹೇಳಬೇಕಿತ್ತು. ರಾಮ ಭಕ್ತರ ನಾಡಲ್ಲಿ ರಾವಣ ಎಂದು ಕರೆಯಬಾರದಿತ್ತು‘ ಎಂದರು.
ಗುಜರಾತ್ನ ಕಾಳೋಲದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮೋದಿಯನ್ನು ಹೆಚ್ಚು ಹೀಯಾಳಿಸಲು, ತೀಕ್ಷ್ಣ ಮಾತುಗಳಿಂದ ಅವಮಾನ ಮಾಡಲು ಕಾಂಗ್ರೆಸ್ನಲ್ಲಿ ಸ್ಪರ್ಧೆಯೇ ನಡೆಯುತ್ತಿದೆ‘ ಎಂದು ಟೀಕಿಸಿದರು.
‘ಈಹಿಂದೆ ಕಾಂಗ್ರೆಸ್ ನಾಯಕರೊಬ್ಬರು ಮೋದಿ ನಾಯಿಯ ಹಾಗೆ ಸಾಯುತ್ತಾರೆ ಎಂದು ಹೇಳಿದ್ದರು. ಇನ್ನೊಬ್ಬರು, ಮೋದಿ, ಹಿಟ್ಲರ್ ರೀತಿ ಸಾಯುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಒಂದು ವೇಳೆ ನನಗೇನಾದರೂ ಅವಕಾಶ ಸಿಕ್ಕರೆ ನಾನು ಮೋದಿಯನ್ನು ಕೊಲ್ಲುತ್ತೇನೆ ಎಂದಿದ್ದಾರೆ. ಕೆಲವರು ರಾವಣ ಎಂದು ಕರೆಯುತ್ತಾರೆ. ಇನ್ನು ಕೆಲವರು ರಾಕ್ಷಸ ಎನ್ನುತ್ತಾರೆ. ಜಿರಳೆ ಎಂದೂ ಕರೆಯುತ್ತಾರೆ. ಕಾಂಗ್ರೆಸ್ ನಾಯಕರ ಈ ಮಾತು ನನಗೆ ಆಶ್ಚರ್ಯ ಉಂಟುಮಾಡುತ್ತಿಲ್ಲ. ಇಷ್ಟಾಗಿಯೂ ಕಾಂಗ್ರೆಸ್ಗೆ ಪಶ್ಚಾತ್ತಾಪ ಇಲ್ಲ. ಈ ದೇಶದ ಪ್ರಧಾನಿಯನ್ನು ಅವಮಾನ ಮಾಡುವುದು ಸರಿ ಎಂದು ಕಾಂಗ್ರೆಸ್ ತಿಳಿದುಕೊಂಡಿದೆ‘ ಎಂದು ಮೋದಿ ಹೇಳಿದರು.
ಅಂದು ಟಿ ವಿ ನಿರೂಪಕಿ ಇಂದು ಮಧ್ಯವರ್ತಿ: ಬಂಧಿತ ಪಿಂಕಿ ಇರಾನಿ ನಿಗೂಢ ಹೆಜ್ಜೆ