Monday, September 27, 2021

ಐಸಿಐಸಿಐ ಬ್ಯಾಂಕ್ ಮಾಜಿ ಮ್ಯಾನೇಜರ್’ನಿಂದ ಹಾಲಿ ಅಸಿಸ್ಟಂಟ್ ಮ್ಯಾನೇಜರ್ ಹತ್ಯೆ

Follow Us

newsics.com

ಮುಂಬೈ: ಖಾಸಗಿ ಬ್ಯಾಂಕ್’ನ ಸಹಾಯಕ ಮಹಿಳಾ ಮ್ಯಾನೇಜರ್’ಗೆ ಮಾಜಿ ಮ್ಯಾನೇಜರ್ ಇರಿದು ಹತ್ಯೆಗೈದ ಘಟನೆ ಮಹಾರಾಷ್ಟ್ರದ ಪಾಲ್ಗಾಟ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಈ ಘಟನೆಯಲ್ಲಿ ಮತ್ತೊಬ್ಬ ಮಹಿಳಾ ಉದ್ಯೋಗಿ ಗಾಯಗೊಂಡಿದ್ದಾರೆ.

ಪಾಲ್ಗಾಟ್ ಜಿಲ್ಲೆಯ ವಿರಾರ್ ನ ಐಸಿಐಸಿಐ ಬ್ಯಾಂಕ್ ಶಾಖೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ ಎಂದು ವರದಿ ತಿಳಿಸಿದೆ.

ಅಸಿಸ್ಟಂಟ್ ಮ್ಯಾನೇಜರ್ ಯೋಗಿತಾ ವರ್ತಕ್ ಹತ್ಯೆಯಾಗಿದ್ದು, ಕ್ಯಾಶಿಯರ್ ಶ್ರದ್ಧಾ ದೇವ್ರುಖಾರ್ ಗಾಯಗೊಂಡಿದ್ದಾರೆ. ಘಟನೆ ವೇಳೆ ಈ ಇಬ್ಬರು ಮಾತ್ರ ಬ್ಯಾಂಕ್ ನಲ್ಲಿದ್ದರು. ಇಬ್ಬರು ಆರೋಪಿಗಳಲ್ಲಿ ಅನಿಲ್ ದುಬೆ ಎಂಬಾತನನ್ನು ಬಂಧಿಸಲಾಗಿದೆ. ದುಬೆ ಇದೇ ಐಸಿಐಸಿಐ ಬ್ಯಾಂಕ್ ಶಾಖೆಯ ಮಾಜಿ ಮ್ಯಾನೇಜರ್ ಎಂದು ವಿರಾರ್ ಪೊಲೀಸ್ ಇನ್ಸ್ ಪೆಕ್ಟರ್ ಸುರೇಶ್ ವಾರ್ಡೆ ತಿಳಿಸಿದ್ದಾರೆ.

ಆರೋಪಿ ದುಬೆ ಹಾಗೂ ದುಬೆ ಸ್ನೇಹಿತ ನಗದು ಮತ್ತು ಚಿನ್ನಾಭರಣ ಕೊಡುವಂತೆ ಯೋಗಿತಾಗೆ ಒತ್ತಾಯಿಸಿದ್ದು ದರೋಡೆ ತಡೆಯಲು ಅಲಾರಾಂ ಒತ್ತಿದ್ದರು. ಈ ವೇಳೆ ಆರೋಪಿಗಳು ಯೋಗಿತಾ ಮತ್ತು ಶ್ರದ್ಧಾಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

 

ಒಲಿಂಪಿಕ್ಸ್’ನಲ್ಲಿ ಕಯಾಕ್’ಗೆ ಕಾಂಡೋಮ್ ತೊಡಿಸಿ ಪದಕ ಗೆದ್ದ ಕ್ರೀಡಾಪಟು

ಸಂಪುಟ ರಚನೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ: ಆಪ್ತರಿಗೆ ಆಘಾತ ನೀಡಿದ ಬಿಎಸ್ವೈ

ಮತ್ತಷ್ಟು ಸುದ್ದಿಗಳು

Latest News

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೆ ಅಪಘಾತ: ಇಬ್ಬರು ಟೆಕ್ಕಿಗಳ ಸಾವು

newsics.com ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಮತ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಟೆಕ್ಕಿಗಳು ಅಸುನೀಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಫೇಸ್ 1 ಹಾಗೂ ಫೇಸ್ 2 ಬೆಸೆಯುವ ಲಿಂಕ್...

ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಪ್ರಧಾನಿ ಮೋದಿ ದಿಢೀರ್ ಭೇಟಿ

newsics.com ನವದೆಹಲಿ: ಪ್ರಧಾನಿ ನರೇಂದ್ರ‌ ಮೋದಿ ಭಾನುವಾರ ರಾತ್ರಿ ಹೊಸ ಸಂಸತ್‌ ಕಟ್ಟಡದ‌ ನಿರ್ಮಾಣ ಸ್ಥಳಕ್ಕೆ ದಿಢೀರ್ ಭೇಟಿ‌ ನೀಡಿದರು. ಅಮೆರಿಕದಿಂದ ಹಿಂದಿರುಗಿ 24 ಗಂಟೆಗಿಂತಲೂ ಮುಂಚೆ ಪ್ರಧಾನಿ ಮೋದಿ ಭಾನುವಾರ ರಾತ್ರಿ 8: 45...

ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್’ಗೆ 54 ರನ್’ಗಳ ಭರ್ಜರಿ ಜಯ

newsics.com ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಲ್ ಪಂದ್ಯದಲ್ಲಿ 54 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ನಾಯಕ ವಿರಾಟ್ ಕೊಹ್ಲಿ (51) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್...
- Advertisement -
error: Content is protected !!