ಪ್ಯಾರಿಸ್: ಫ್ರಾನ್ಸ್ ನಿಂದ ಭಾರತಕ್ಕೆ ಹೊರಟಿರುವ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ದಾರಿ ಮಧ್ಯೆ ಆಕಾಶದಲ್ಲಿ ಇಂಧನ ತುಂಬಿಸಿದೆ. 30000 ಸಾವಿರ ಅಡಿ ಎತ್ತರದಲ್ಲಿ ಈ ವಿಮಾನಗಳಿಗೆ ಇಂಧನ ತುಂಬಿಸಲಾಗಿದೆ. ರಫೇಲ್ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸುತ್ತಿರುವ ಚಿತ್ರ ಇದೀಗ ಬಿಡುಗಡೆ ಮಾಡಲಾಗಿದೆ.
ಭಾರತಕ್ಕೆ ಆಗಮಿಸಲಿರುವ ರಫೇಲ್ ಯುದ್ಧ ವಿಮಾನ ಅಂಬಾಲ ವಾಯುನೆಲೆಯಲ್ಲಿ ಬಂದಿಳಿಯಲಿವೆ. ವಿಮಾನಗಳ ಭವ್ಯ ಸ್ವಾಗತಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಾಯು ಸೇನಾ ಮುಖ್ಯಸ್ಥರು ಸೇರಿದಂತೆ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಭಾರತದ ಪೈಲಟ್ ಗಳು ವಿಮಾನ ಹಾರಾಟಕ್ಕೆ ಸಮರ್ಥರಾಗಿದ್ದು, ಅತ್ಯಲ್ಪ ಅವಧಿಯಲ್ಲಿ ಪರಿಣಿತರಾಗಿದ್ದಾರೆ ಎಂದು ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಪ್ರತಿಕ್ರಿಯಿಸಿದ್ದಾರೆ. 36 ರಫೇಲ್ ವಿಮಾನಗಳ ಪೈಕಿ ಇದೀಗ ಮೊದಲ ಹಂತವಾಗಿ ಐದು ವಿಮಾನಗಳು ಭಾರತಕ್ಕೆ ಆಗಮಿಸುತ್ತಿವೆ