newsics.com
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,166 ಮಂದಿಗೆ ಕೊರೋನಾ ಸೋಂಕು ತಗುಲಿದೆ. 214 ಸೋಂಕಿತರು ಅಸುನೀಗಿದ್ದಾರೆ. ಇದೇ ಅವಧಿಯಲ್ಲಿ 23,624 ಜನ ಗುಣಮುಖರಾಗಿದ್ದಾರೆ.
ಕಳೆದ 214 ದಿನಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಕೋವಿಡ್ ಪ್ರಕರಣಗಳು ಇಂದು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 214 ಸೋಂಕಿತರ ಸಾವಿನಿಂದ ದೇಶದ ಕೊರೋನಾ ವೈರಸ್ ಸಾವಿನ ಸಂಖ್ಯೆ 4,50,589 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೋವಿಡ್ನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣವು ಶೇಕಡಾ 97.99 ಆಗಿದ್ದು, ಈವರೆಗೆ ಒಟ್ಟು 3,32,71,915 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಸದ್ಯ 2,30,971 ಸಕ್ರಿಯ ಪ್ರಕರಣಗಳಿವೆ.
ರಾಷ್ಟ್ರೀಯ ರೋಗನಿರೋಧಕ ಅಭಿಯಾನದ ಅಡಿಯಲ್ಲಿ ಸರ್ಕಾರವು ಈವರೆಗೆ 94.70 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಕಲಬುರಗಿ, ವಿಜಯಪುರ ಜಿಲ್ಲೆಗಳ ಹಲವೆಡೆ ಮತ್ತೆ ಭೂಕಂಪನ, ಜನರಲ್ಲಿ ಹೆಚ್ಚಿದ ಆತಂಕ