newsics.com
ಬೆಂಗಳೂರು: ಅರಮನೆ ಹಾಗೂ ಚಾಮುಂಡಿ ಬೆಟ್ಟಕ್ಕಷ್ಟೇ ಸೀಮಿತವಾಗಿ ನಡೆಯಲಿರುವ ಈ ಬಾರಿಯ ಸರಳ ದಸರಾ ಅಕ್ಟೋಬರ್ 17ರಂದು ಕೊರೋನಾ ವಾರಿಯರ್ಸ್’ಗಳಿಂದ ಉದ್ಘಾಟನೆಯಾಗಲಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ
ಕೊರೋನಾ ಸಂಕಷ್ಟ ಹಿನ್ನೆಲೆಯಲ್ಲಿ ಈ ಬಾರಿಯ ನಾಡಹಬ್ಬ ದಸರಾ ಸರಳವಾಗಿ ಆಚರಣೆಗೊಳ್ಳಲಿದ್ದು, ಈ ಬಾರಿ ದಸರಾ ವೇಳೆ ನಡೆಯುವ ಎಲ್ಲಾ ಕಾರ್ಯಕ್ರಮಗಳು ಸಾಮಾಜಿಕ ತಾಣಗಳಲ್ಲಿ ನೇರಪ್ರಸಾರ ಆಗಲಿವೆ ಎಂದು ಸೋಮಶೇಖರ್ ಹೇಲಿದರು.
ಈ ಮಾಹಿತಿ ನೀಡಿದ ಸಚಿವ ಎಸ್.ಟಿ. ಸೋಮಶೇಖರ್ ಅವರು, ಈ ಬಾರಿ ಅಕ್ಟೋಬರ್ 17ರಂದು ಬೆಳಗ್ಗೆ 7.45ರಿಂದ 8.15 ಸಮಯದಲ್ಲಿ ದಸರಾ ಉದ್ಘಾಟನೆಯಾಗಲಿದೆ. ದಸರಾ ಮಹೋತ್ಸವವನ್ನು ಕೊರೋನಾ ವಾರಿಯರ್ಸ್ ಉದ್ಘಾಟಿಸಲಿದ್ದಾರೆ ಎಂದರು.
ಚಾಮುಂಡಿ ಬೆಟ್ಟ, ಅರಮನೆಗೆ ದಸರಾ ಸೀಮಿತವಾಗಿ ನಡೆಯಲಿದೆ. ಅಕ್ಟೋಬರ್ 2ರ ಮಧ್ಯಾಹ್ನ 12 ಗಂಟೆಗೆ ಗಜಪಡೆ ಆಗಮನ ಆಗಲಿದೆ. ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಭಾಗಿ ಆಗಲಿವೆ. ಅರಮನೆ ಆವರಣದಲ್ಲಿ ಮಾತ್ರ ಜಂಬೂಸವಾರಿ ನಡೆಯಲಿದೆ. ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎಂಬುದಾಗಿ ಮಾಹಿತಿ ನೀಡಿದರು.
ಜಂಬೂಸವಾರಿ ಈ ಬಾರಿ ಅರಮನೆ ಆವರಣಕ್ಕೆ ಸೀಮಿತ