newsics.com
ನವದೆಹಲಿ: ದೇಶದಲ್ಲಿ ಈಗ 13.8 ಕೋಟಿ ವೃದ್ಧರಿದ್ದು, 2031ರ ವೇಳೆಗೆ ವಯಸ್ಸಾದ ಮಹಿಳೆಯರೇ ಹೆಚ್ಚಿರುತ್ತಾರೆ.
ರಾಷ್ಟ್ರೀಯ ಅಂಕಿ ಅಂಶ ಕಚೇರಿಯ (NSO) ಅಧ್ಯಯನ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ದೇಶದಲ್ಲಿ 1961 ರಿಂದಲೂ ವೃದ್ಧರ ಜನಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ವೃದ್ಧರ ಸಾವಿನ ಪ್ರಮಾಣ ಕಡಿಮೆಯಾಗಿರುವುದೇ ಕಾರಣವೆಂದು ವರದಿ ಹೇಳಿದೆ.
ಈಗ ವೃದ್ಧೆಯರಿಗಿಂತ ವಯಸ್ಸಾದ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ 2031ರ ಹೊತ್ತಿಗೆ ವಯಸ್ಸಾದ ಮಹಿಳೆಯರೇ ವೃದ್ಧರಿಗಿಂತ ಹೆಚ್ಚಿರುತ್ತಾರೆ ಎಂದು ವರದಿ ಅಂದಾಜಿಸಿದೆ.
60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಹಿರಿಯರು ಅಥವಾ ವೃದ್ಧರೆಂದು ವರದಿಯಲ್ಲಿ ಪರಿಗಣಿಸಲಾಗಿದೆ.
2001-2011ರ ಅವಧಿಯಲ್ಲಿ ವೃದ್ಧರ ಸಂಖ್ಯೆ 27 ಮಿಲಿಯನ್ (2.7 ಕೋಟಿ) ಗಿಂತ ಹೆಚ್ಚಿದೆ. 2011ರಲ್ಲಿ ಭಾರತದಲ್ಲಿ ವೃದ್ಧರ ಜನಸಂಖ್ಯೆ 103.8 ಮಿಲಿಯನ್ (10.38 ಕೋಟಿ) 52.8 ಮಿಲಿಯನ್ ಪುರುಷರು (5.28 ಕೋಟಿ) ಮತ್ತು 51.1 ಮಿಲಿಯನ್ (5.11 ಕೋಟಿ) ಮಹಿಳೆಯರಿದ್ದಾರೆ.
2031 ರ ವೇಳೆಗೆ 92.9 ಮಿಲಿಯನ್ ವೃದ್ಧ ಪುರುಷರು (9.29 ಕೋಟಿ) ಮತ್ತು 100.9 ಮಿಲಿಯನ್ (10.09 ಕೋಟಿ) ವೃದ್ಧ ಮಹಿಳೆಯರು ಸೇರಿದಂತೆ 1931 ಮಿಲಿಯನ್ (19.38 ಕೋಟಿ) ಗೆ ತಲುಪುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.
ದೇಶದಲ್ಲಿ ವಯೋವೃದ್ಧರ ಜನಸಂಖ್ಯೆ 1961ರಿಂದ ಹೆಚ್ಚಳವಾಗುತ್ತಿದೆ. 1981ರ ಜನಗಣತಿಯ ನಂತರ ದೇಶದಲ್ಲಿ ವಿವಿಧ ಆರೋಗ್ಯ ಯೋಜನೆಗಳಿಂದ ಮರಣ ಪ್ರಮಾಣ ಇಳಿಕೆಯಿಂದಾಗಿ ವಯಸ್ಸಾದವರ ಜನಸಂಖ್ಯೆಯ ಬೆಳವಣಿಗೆ ವೇಗ ಪಡೆದುಕೊಂಡಿದೆ ಎಂದು ಎನ್ಎಸ್ಒ ವರದಿ ತಿಳಿಸಿದೆ.
ಇನ್ನು ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶಾವಕಾಶ: ಪ್ರಧಾನಿ ಮೋದಿ ಘೋಷಣೆ