ನವದೆಹಲಿ: ಚೀನಾ ದೇಶದ ಗಡಿಯಲ್ಲಿ ಕಳೆದ ಏಪ್ರಿಲ್‍ನಿಂದ ತನ್ನ ಸೈನಿಕರ ಪ್ರಮಾಣವನ್ನು ಹೆಚ್ಚಿಸುತ್ತ ಬಂದಿದೆ. ಇದು ಭಾರತದ ಗಮನದಲ್ಲಿದೆ. ಎರಡು ದೇಶದ ಗಡಿಯಲ್ಲಿ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಬಾರದೆಂಬ ಒಪ್ಪಂದದ ಕುರಿತು ಮಾತುಕತೆ ನಡೆದಿತ್ತು. ಚೀನಾ ಹಾಗೂ ಭಾರತದ ನಡುವೆ ಈ ವಿಚಾರದಲ್ಲಿ ಸಹಮತ ಮೂಡಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಚೀನಾ ಇದಕ್ಕೆ ಆಸಕ್ತಿ ತೋರಿಸಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸಿಂಗ್ ಗಡಿತಂಟೆಗಳ ಸಮಗ್ರ ಇತಿಹಾಸವನ್ನು ಹಂಚಿಕೊಂಡಿದ್ದಾರೆ. ಭಾರತದ ಭೂಭಾಗವನ್ನು ಆಕ್ರಮಿಸಿ ಪಾಕ್ ಚೀನಾಕ್ಕೆ ಬಿಟ್ಟುಕೊಟ್ಟಿದೆ. ಗಡಿಯಲ್ಲಿ ಯಾವುದೇ ಸ್ಪಷ್ಟತೆಯಿಲ್ಲ. ಚೀನಾ,ಭಾರತ ಗಡಿ ಅಷ್ಟು ಸ್ಪಷ್ಟವಾಗಿಲ್ಲ. ಅಂತಾರಾಷ್ಟ್ರೀಯ ಗಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೆಚ್ಚಿನ ತಾಳ್ಮೆ ಬೇಕು ಎಂದು ಅವರು ವಿವರಣೆ ನೀಡಿದ್ದಾರೆ.
ಚೀನಾ ಎಲ್‍ಎಸಿಯಲ್ಲಿ ನಿಧಾನಕ್ಕೆ ತನ್ನ ಸೈನಿಕರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಭಾರತವೂ ಇದನ್ನು ಗಮನಿಸಿದೆ. ಮತ್ತು ನಮ್ಮ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ನಮ್ಮ ಎಲ್ಲ ಪಡೆಗಳ ಮೇಲೆ ನಮಗೆ ಗೌರವವಿದೆ. ದೇಶದ ಗಡಿ ಭಾಗದ ಎಲ್ಲ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ಎರಡುಪಟ್ಟು ಮೂಲಸೌಕರ್ಯ ಅಭಿವೃದ್ಧಿ ಪಡಿಸಲಾಗಿದೆ. ಹೀಗಾಗಿ ನಮಗೆ ಸೇನೆ ಗಡಿಭಾಗದ ಎಲ್ಲ ಬಿಕ್ಕಟ್ಟುಗಳನ್ನು ಎದುರಿಸಲು ಸನ್ನದ್ಧವಾಗಿದೆ. ಆದರೆ ಇವೆಲ್ಲ ಸೂಕ್ಷ್ಮವಿಚಾರ. ಹೀಗಾಗಿ ಹೆಚ್ಚಿನ ವಿವರಣೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇತ್ತೀಚಿಗೆ ಚೀನಾ ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದೆ. ಚೀನಾದ ಆಕ್ರಮಣಕಾರಿ ನೀತಿ ಹಾಗೂ ಗಡಿಯ ಸೈನಿಕರ ಅತಿಕ್ರಮಣದ ಬಗ್ಗೆ ಮಾಹಿತಿ ನೀಡಿದ್ದೇನೆ. ಅಲ್ಲದೇ ನಾವು ದೇಶದ ಸಾರ್ವಭೌಮತೆ ಕಾಪಾಡಲು ಸಿದ್ಧವಾಗಿದ್ದೇವೆ ಎಂಬುದನ್ನು ಹೇಳಿದ್ದೇನೆ ಎಂದು ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದಾರೆ.
ಚೀನಾಕ್ಕೆ ಗಡಿ ವಿವಾದ ಕೊನೆಗಾಣಿಸುವ ಮನಸ್ಸಿಲ್ಲ -ರಾಜನಾಥ್ ಸಿಂಗ್
Follow Us