Tuesday, April 13, 2021

ಡ್ರೋಣ್ ಮೂಲಕ ಉಗ್ರರಿಗೆ ಶಸ್ತಾಸ್ತ್ರ ಪೂರೈಕೆ- ಪಾಕ್ ಯತ್ನ ವಿಫಲ

ಶ್ರೀನಗರ: ಮುಂಜಾನೆ ಐದು ಗಂಟೆ ಹೊತ್ತಿಗೆ ಭಾರತದ ಸೇನಾಪಡೆ ಹೊಡೆದುರುಳಿಸಿದ್ದ ಪಾಕಿಸ್ತಾನದ ಡ್ರೋಣ್ ನಲ್ಲಿ ಅತ್ಯಾಧುನಿಕ ಶಸ್ತಾಸ್ತ್ರಗಳು ಇದ್ದವು ಎಂಬ ಸ್ಫೋಟಕ ಮಾಹಿತಿ ಇದೀಗ ಹೊರ ಬಿದ್ದಿದೆ. ಜಮ್ಮು ಕಾಶ್ಮೀರದ ಕಥುವಾ ಬಳಿ ನೆಲದಿಂದ 150 ರಿಂದ 200 ಅಡಿಗಳಷ್ಟು ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಡ್ರೋಣ್ ನ್ನು ಪತ್ತೆ ಹಚ್ಚಿದ ಭದ್ರತಾಪಡೆ ಕ್ಷಣಮಾತ್ರದಲ್ಲಿ ಅದನ್ನು ನೆಲಕ್ಕೆ ಉರುಳಿಸಿತು. ಅದು  ಪಾಕಿಸ್ತಾನ ಕಡೆಯಿಂದ ಭಾರತದ ಭೂ ಪ್ರದೇಶ ಪ್ರವೇಶ ಮಾಡಿತ್ತು. ಪತನಗೊಂಡ ಡ್ರೋಣ್ ನಲ್ಲಿ ಒಂದು ಅತ್ಯಾಧುನಿಕ ರೈಫಲ್‌ ಮತ್ತು ಏಳು ಗ್ರೆನೇಡ್ ಪತ್ತೆಯಾಗಿದೆ.  ಎಂ-4 ಅತ್ಯಾಧುನಿಕ ರೈಫಲನ್ನು ವಶಪಡಿಸಿಕೊಳ್ಳಲಾಗಿದ್ದು, ಇತ್ತೀಚೆಗೆ  ಜಮ್ಮು ಕಾಶ್ಮೀರದ ನರ್ಗೋತಾದಲ್ಲಿ ಹತನಾದ ಜೈಶ್ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕನಿಂದಲೂ ಇದೇ ಮಾದರಿಯ ರೈಫಲನ್ನು ವಶಪಡಿಸಿಕೊಳ್ಳಲಾಗಿತ್ತು. ಪಾಕಿಸ್ತಾನ ಡ್ರೋಣ್ ಮೂಲಕ ಈ ಶಸ್ತಾಸ್ತ್ರಗಳನ್ನು ಉಗ್ರರಿಗೆ ತಲುಪಿಸುವ ಸಂಚು ಹೂಡಿತ್ತು ಎಂದು ಶಂಕಿಸಲಾಗಿದೆ. ಉಗ್ರರ ಕೈ ಸೇರುವ ಮೊದಲೇ ಈ  ಸಂಚನ್ನು ವಿಫಲಗೊಳಿಸಿದ ಕಾರಣ ಸಂಭಾವ್ಯ ಭಾರೀ ದುರಂತವನ್ನು ತಪ್ಪಿಸಲಾಗಿದೆ. ಈ ಶಸ್ತಾಸ್ತ್ರಗಳು ಉಗ್ರರಿಗೆ ತಲುಪಿದ್ದರೇ ಅತ್ಯಲ್ಪ ಅವಧಿಯಲ್ಲಿ  ಭಯೋತ್ಪಾದನಾ ಕೃತ್ಯ ನಡೆಯುವ ಸಾಧ್ಯತೆಯಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಚೀನಾ ನಿರ್ಮಿತ ಡ್ರೋಣ್ ಆಗಿದ್ದು, 17.5 ಕಿಲೋ ಭಾರ ಹೊಂದಿತ್ತು

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!