ನವದೆಹಲಿ: ಭಾರತ ರಕ್ಷಣಾ ಸನ್ನದ್ದತೆಯಲ್ಲಿ ಮಹತ್ವದ ಮೈಲುಗಲ್ಲು ದಾಖಲಿಸಿದೆ. ಐಎನ್ ಎಸ್ ಅರಿಹಂತ್ ಶ್ರೇಣಿಯ ಸಬ್ ಮೇರಿನ್ ಗಳಿಗಾಗಿ ಅಭಿವೃದ್ದಿಪಡಿಸಲಾಗುತ್ತಿರುವ 3500 ಕಿಲೋ ಮೀಟರ್ ಕ್ರಮಿಸಬಲ್ಲ ಹಾಗೂ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯ ಬಲ್ಲ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನ಼ಡೆಸಿದೆ. ಪೂರ್ವ ಕರಾವಳಿ ತೀರದಲ್ಲಿ ಭಾರತ ಈ ಪರೀಕ್ಷೆ ನಡೆಸಿದೆ. ಸತತ ನಾಲ್ಕು ಬಾರಿ ಮುಂದೂಡಲಾಗಿದ್ದ ಕ್ಷಿಪಣಿ ಪರೀಕ್ಷೆ ಭಾನುವಾರ ಯಶಸ್ವಿಯಾಗಿ ನ಼ಡೆದಿದೆ ಎಂದು ಮೂಲಗಳು ಹೇಳಿವೆ. ಇದು ಭಾರತದ ಮೇಲೆ ಶತ್ರು ರಾಷ್ಟ್ರ ಅಣು ಅಸ್ತ್ರ ಪ್ರಯೋಗಿಸಿದರೆ, ಪ್ರತಿದಾಳಿ ನಡೆಸುವ ಸಾಮರ್ಥ್ಯವನ್ನು ಹೆಚ್ಚಿಸಲಿದ್ದು, ಪಾಕಿಸ್ತಾನಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ.