Saturday, April 17, 2021

ರಾಕ್‌ಬ್ಯಾಂಕ್‌ ರಸ್ತೆಗಳಿಗೆ ಭಾರತೀಯ ಕ್ರಿಕೆಟಿಗರ ಹೆಸರು!

ಮೆಲ್ಬರ್ನ್‌: ಇಲ್ಲಿಗೆ ಸಮೀಪದ ರಾಕ್‌ಬ್ಯಾಂಕ್‌ ಉಪನಗರದ ಬೀದಿಗಳಿಗೆ ಭಾರತದ ದಿಗ್ಗಜ ಕ್ರಿಕೆಟಿಗರ ಹೆಸರು ನಾಮಕರಣಗೊಳ್ಳಲಿದೆ.
ರಾಕ್‌ಬ್ಯಾಂಕ್ ಉಪನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೌಸಿಂಗ್‌ ಎಸ್ಟೇಟ್‌ನ ಪ್ರಮುಖ ಬೀದಿಗಳಿಗೆ ಕಪಿಲ್‌ ದೇವ್‌, ಸಚಿನ್‌ ತೆಂಡೂಲ್ಕರ್‌ ಹಾಗೂ ವಿರಾಟ್‌ ಕೊಹ್ಲಿ ಅವರ ಹೆಸರಿಡಲು ಮುಂದಾಗಿದೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದವರನ್ನು ಸೆಳೆಯುವ ಸಲುವಾಗಿ ಆಯಕೋಲೇಡ್‌ ಎಸ್ಟೇಟ್‌ ಸಂಸ್ಥೆ ಭಾರತೀಯರ ಹೆಸರಿಡಲು ಮುಂದಾಗಿದೆ ಎಂದು ಹೇಳಲಾಗಿದೆ.
ಇವರಲ್ಲದೆ ಆಸ್ಟ್ರೇಲಿಯಾದ ಸ್ಟೀವ್‌ ವಾ (ವಾ ಸ್ಟ್ರೀಟ್‌), ಪಾಕಿಸ್ತಾನದ ಜಾವೇದ್‌ ಮಿಯಂದಾದ್ (ಮಿಯಂದಾದ್‌ ಸ್ಟ್ರೀಟ್‌), ವೆಸ್ಟ್‌ ಇಂಡೀಸ್‌ನ ಕರ್ಟ್ಲಿ ಆಯಂಬ್ರೋಸ್ (ಆಯಂಬ್ರೋಸ್‌ ಸ್ಟ್ರೀಟ್‌) ಹಾಗೂ ಗ್ಯಾರಿ ಸೋಬರ್ಸ್ (ಸೋಬರ್ಸ್‌ ಡ್ರೈವ್‌), ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್ (ಕಾಲಿಸ್‌ ವೇ‌), ನ್ಯೂಜಿಲೆಂಡ್‌ನ ರಿಚರ್ಡ್‌ ಹ್ಯಾಡ್ಲಿ (ಹ್ಯಾಡ್ಲಿ ಸ್ಟ್ರೀಟ್‌) ಮತ್ತು ಪಾಕಿಸ್ತಾನದ ವಾಸೀಂ ಅಕ್ರಂ (ಅಕ್ರಮ್‌ ವೇ) ಅವರ ಹೆಸರನ್ನು ಬೀದಿಗಳಿಗೆ ನಾಮಕರಣ ಮಾಡಲು ನಿಶ್ಚಯಿಸಿದೆ.
‘ನಾವು 60 ಕ್ರಿಕೆಟಿಗರ ಪಟ್ಟಿಯನ್ನು ಮೆಲ್ಬರ್ನ್‌ ಕೌನ್ಸಿಲ್‌ಗೆ ಕಳುಹಿಸಿದ್ದೆವು. ಇದರಲ್ಲಿ ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌, ಶ್ರೀಲಂಕಾದ ಕುಮಾರ ಸಂಗಕ್ಕಾರ, ಭಾರತದ ರಾಹುಲ್‌ ದ್ರಾವಿಡ್‌ ಮತ್ತು ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರುಗಳೂ ಇದ್ದವು. ಕೆಲ ಕಾರಣಗಳಿಂದಾಗಿ ಈ ಹೆಸರುಗಳನ್ನು ಕೈಬಿಡುವಂತೆ ಕೌನ್ಸಿಲ್‌ ಸೂಚಿಸಿದೆ’ ಎಂದು ರೆಸಿ ವೆಂಚರ್‌ನ ನಿರ್ದೇಶಕ ಖುರಮ್‌ ಸಯೀದ್‌ ತಿಳಿಸಿದ್ದಾರೆ.
‘ಕೊಹ್ಲಿ ನನ್ನ ಮೆಚ್ಚಿನ ಆಟಗಾರ. ಹೀಗಾಗಿ ಪ್ರತಿಷ್ಠಿತ ಬಡಾವಣೆಯ ಬೀದಿಗೆ ಅವರ ಹೆಸರಿಟ್ಟಿದ್ದೇನೆ’ ಎಂದೂ ಅವರು ನುಡಿದಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!