♦ ಚೀನಾದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ಸಂಪಾದಕನ ಪ್ರಲಾಪ
ಬೀಜಿಂಗ್: ಭಾರತೀಯರು ಅಸಹ್ಯ ಮನಸ್ಥಿತಿಯವರು. ಭಾರತದ ಜನ ನಾಚಿಕೆಗೆಟ್ಟವರು, ಸೋಮಾರಿಗಳು… ಸದಾಕಾಲ ಚೀನಿ ವಸ್ತುಗಳನ್ನು ಬಹಿಷ್ಕರಿಸುವ ಮಾತನಾಡುವ ಭಾರತೀಯರು ಕೊನೆಗೆ ಮತ್ತೆ ಚೀನಿ ವಸ್ತುಗಳನ್ನೇ ಖರೀದಿಸುತ್ತಾರೆ. ಅವರಿಗೆ ಸ್ವಾಭಿಮಾನವೇ ಇಲ್ಲ…
ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ಸಂಪಾದಕ, ಚೀನೀ ಕಮ್ಯೂನಿಸ್ಟ್ ಪಕ್ಷದ ಸದಸ್ಯ ಹು ಕ್ಸಿಜಿನ್ ಭಾರತೀಯರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ವಿವಾದಕ್ಕೊಳಗಾಗಿದ್ದಾನೆ.
ಹು ಕ್ಸಿಜಿನ್ ತನ್ನ ಗ್ಲೋಬಲ್ ಟೈಮ್ಸ್ನಲ್ಲಿ ಈ ಬಗ್ಗೆ ಲೇಖನ ಬರೆದಿದ್ದು, ಭಾರತೀಯರು ಸೊಂಬೇರಿಗಳು. ಅವರು ತಮ್ಮ ಸ್ವಂತಿಕೆ ಯಿಂದ ಏನನ್ನೂ ಸಿದ್ಧಪಡಿಸುವುದಿಲ್ಲ. ಕಳಪೆ ಮನಸ್ಥಿತಿಯವರಾಗಿದ್ದು ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಮಾತನಾಡಿ ಆಮೇಲೆ ಮುಗಿಬಿದ್ದು ಚೀನಾ ವಸ್ತುಗಳನ್ನೇ ಖರೀದಿಸುತ್ತಾರೆ ಎಂದು ಟೀಕಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಈ ಹಿಂದೆಯೂ ಹೂ ಕಿಜ್ಸಿನ್ ಇಂತಹುದೇ ಹಲವು ಟೀಕೆಗಳನ್ನು ಮಾಡಿದ್ದು, ಚೀನಾ ಭಾರತದೊಂದಿಗೆ ಯುದ್ಧ ಮಾಡಿದರೆ 50 ಹೋಳುಗಳಾಗಲಿದೆ ಎಂದು ಕಮೆಂಟ್ ಮಾಡಿದ್ದ. ಇದೀಗ ಭಾರತೀಯರ ಚೀನಾ ಬಹಿಷ್ಕಾರ ಅಭಿಯಾನ ಹಾಗೂ ಮನಸ್ಥಿತಿಯ ಬಗ್ಗೆ ಟೀಕಿಸಿದ್ದಾನೆ.
ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸ್ವತಂತ್ರವಾದ ಮಾಧ್ಯಮ (ಪತ್ರಿಕೆ, ನ್ಯೂಸ್ ಚಾನೆಲ್) ಕೆಲಸ ನಿರ್ವಹಿಸುತ್ತಿದ್ದರೆ, ಚೀನಾದಲ್ಲಿ ಆ ವ್ಯವಸ್ಥೆಯಿಲ್ಲ. ಅಲ್ಲಿನ ಮಾಧ್ಯಮಗಳು ಸರ್ಕಾರದ ಮುಖವಾಣಿಯಾಗಿ ಕೆಲಸ ನಿರ್ವಹಿಸುತ್ತವೆ. ಗ್ಲೋಬಲ್ ಟೈಮ್ಸ್ ಕೂಡ ಇಂತಹುದೇ ದೊಡ್ಡದಾದ ಸರ್ಕಾರಿ ಪತ್ರಿಕೆ. ಇದರ ಸಂಪಾದಕ ಚೀನೀ ಕಮ್ಯುನಿಸ್ಟ್ ಪಕ್ಷದ ಸದಸ್ಯ ಹು ಕ್ಸಿಜಿನ್.
ಮಾರಕ ಕೊರೋನಾ ಸೋಂಕು ಹರಡುವ ಮೂಲಕ ಜಗತ್ತಿನ ಪಾಲಿಗೆ ತಲೆನೋವಾಗಿ ಪರಿಣಮಿಸಿರುವ ಚೀನಾ ಭಾರತದ ಪಾಲಿಗೆ ಸದಾ ಮಗ್ಗುಲ ಮುಳ್ಳಾಗಿದೆ.
