ಲಂಡನ್: ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಾಕ್ ಬ್ರಿಟನ್ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬ್ರಿಟನ್ ಸರ್ಕಾರದ ಎರಡನೇ ಅತಿ ದೊಡ್ಡ ಸ್ಥಾನ ಇದಾಗಿದೆ.
ಬ್ರಿಟನ್ ನ ಹಣಕಾಸು ಸಚಿವರಾಗಿದ್ದ ಪಾಕ್ ಮೂಲದ ಸಾಜಿದ್ ಜಾವೀದ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಿಷಿ ಸುನಾಕ್ ಅವರನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಕ ಮಾಡಿದ್ದಾರೆ.
ರಿಷಿ ಸುನಾಕ್ ಅವರು ನಾರಾಯಣಮೂರ್ತಿ-ಸುಧಾ ಮೂರ್ತಿ ಪುತ್ರಿ ಅಕ್ಷತಾ ಅವರನ್ನು 2015 ರಲ್ಲಿ ವಿವಾಹವಾಗಿದ್ದರು. ಕನ್ಸರ್ವೇಟಿವ್ ಪಕ್ಷದ ಪ್ರಮುಖ ನಾಯಕರಾಗಿರುವ ಅವರು 2015 ರಲ್ಲಿ ಬ್ರಿಟನ್ ಪ್ರವೇಶಿಸಿದ್ದರು.
ರಿಷಿ ಸುನಾಕ್ ಜತೆಗೆ ಮತ್ತೊಬ್ಬ ಭಾರತೀಯ ಸಂಜಾತ ಅಲೋಕ್ ಶರ್ಮಾ ಸಹ ಬ್ರಿಟನ್ ಸಂಪುಟ ಸೇರಿದ್ದಾರೆ. ಅವರಿಗೆ ಉದ್ಯಮ ಖಾತೆ ನೀಡಲಾಗಿದೆ. ಭಾರತ ಮೂಲದ ಪ್ರೀತಿ ಪಟೇಲ್ ಈಗಾಗಲೇ ಬ್ರಿಟನ್ ನ ಗೃಹ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಈಗ ಬ್ರಿಟನ್ ಹಣಕಾಸು ಸಚಿವ
Follow Us